ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11,046 ಮಕ್ಕಳಿಗೆ ಎರಡು ಹಂತಗಳ ಲಸಿಕೆ

ಮಕ್ಕಳ ಲಸಿಕೆಗೆ ಚಾಲನೆ; ಎಂ.ವೈ. ಪಾಟೀಲ ಹೇಳಿಕೆ
Last Updated 4 ಜನವರಿ 2022, 4:12 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ 11,046 ಮಕ್ಕಳಿಗೆ ಎರಡು ಹಂತಗಳಲ್ಲಿ ಕೋವಿಡ್ ಲಸಿಕೆ ಹಾಕಲಾಗುತ್ತದೆ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಕೋವಿಡ್ ಹಬ್ಬದಿ ಬಳಿಕ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಸೋಂಕು ಬಾರದಂತೆ ಮುಂಜಾಗೃತೆ ವಹಿಸಿದರೆ, ಅದರ ಹರಡುವಿಕೆಗೆ ಕಡಿವಾಣ ಹಾಕಬಹುದು. ಹೀಗಾಗಿ, ಪ್ರತಿಯೊಬ್ಬರು ಕೋವಿಡ್ ಮಾರ್ಗ ಸೂಚಿಯನ್ನು ಪಾಲಿಸಬೇಕು ಎಂದರು.

ನೆರೆಯ ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ.ಜಿಲ್ಲೆಯ ಗಡಿ ಭಾಗದಲ್ಲಿ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಭಯಕುಮಾರ ಮಾತನಾಡಿ, ತಾಲ್ಲೂಕಿನ 15ರಿಂದ 18 ವರ್ಷದೊಳಗಿನ 11,046 ಮಕ್ಕಳಿಗೆ ಲಸಿಕೆ ನೀಡಬೇಕಿದೆ. ಒಟ್ಟು 82 ಶಾಲಾ ಕಾಲೇಜುಗಳಿದ್ದು, ಅದರಲ್ಲಿ 19 ಕಾಲೇಜು, 63 ಪ್ರೌಢ ಶಾಲೆಗಳಿವೆ. 9ನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದರು.

ಮಕ್ಕಳು ಯಾವುದೇ ಕಾರಣಕ್ಕೂ ಲಸಿಕೆ ಬಗ್ಗೆ ಭಯ ಪಡಬಾರದು. ತಜ್ಞರ ಸಮೀತಿ ಶಿಫಾರಸು ಮಾಡಿದ ಬಳಿಕವೇ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಮೊದಲ ಡೋಸ್ ಹಾಕಿಸಿಕೊಂಡ 28 ದಿನಗಳ ನಂತರ ಎರಡನೇ ಡೋಸ್‌ ಅನ್ನು ತಪ್ಪದೆ ಪಡೆಯಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರೇಣುಕಾ ಪಾಟೀಲ, ತಹಶೀಲ್ದಾರ್ ನಾಗಮ್ಮ ಎಂ.ಕೆ, ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಪಿ, ತಾಲ್ಲೂಕಾ ವೈದ್ಯಾಧಿಕಾರಿ ರತ್ನಾಕರ ತೋರಣ, ಬಿಇಒ ಎಚ್.ಎಸ್.ದೇಶಮುಖ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪ್ರಾಚಾರ್ಯ ಬಿ.ಎಸ್.ಪೂಜಾರಿ, ಎಚ್.ಎಸ್.ಪಾಟೀಲ, ಜಿ.ಪಂಮಾಜಿ ಸದಸ್ಯ ಪ್ರಕಾಶ ಜಮಾದಾರ್, ತಾ.ಪಂಮಾಜಿ ಅಧ್ಯಕ್ಷ ಶಿವಾನಂದ ಗಾಡಿಸಾಹುಕಾರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶರಣು ಕುಂಬಾರ, ಮುಖಂಡರಾದ ರಾಜಶೇಖರ ಪಾಟೀಲ, ತಿಪ್ಪಣ್ಣ ಗಾಡಿವಡ್ಡರ, ವಿಶ್ವನಾಥ ಮಲಘಾಣ, ನಿಂಗಪ್ಪ ಚಲವಾದಿ, ಸಾರ್ವಜನಿಕ ಆಸ್ಪತ್ರೆಯ ವಿನಾಯಾಕ ಜೋಷಿ, ಕೆ.ಎಸ್.ಬಡೆಪೂರ, ಮುತ್ತಪ್ಪ, ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT