ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣೂರಲ್ಲಿ ನ.18 ವೇದೇಶತೀರ್ಥರ ಆರಾಧನಾ ಮಹೋತ್ಸವ

Published 16 ನವೆಂಬರ್ 2023, 14:36 IST
Last Updated 16 ನವೆಂಬರ್ 2023, 14:36 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ನ.18 ರಿಂದ 20ರವರೆಗೆ ಉತ್ತರಾದಿ ಮಠಾಧೀಶರಾದ ವೇದೇಶತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಜರುಗಲಿದೆ.

ಈ ಕುರಿತು ಗುರುವಾರ ವೇದೇಶತೀರ್ಥ ಟ್ರಸ್ಟ್ ಕಮಿಟಿಯವರು ಮಾಹಿತಿ ನೀಡಿ ನ. 18 ರಂದು ಪೂರ್ವಾರಾಧನೆ, ನ.19 ರಂದು ಮದ್ಯಾರಾಧನೆ, ನ.20 ರಂದು ಉತ್ತರಾರಾಧನೆ ಜರುಗಲಿದೆ.

20 ರಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, 11 ಗಂಟೆಗೆ ಗ್ರಾಮದ ಪಾಂಡುರಂಗ ದೇವಸ್ಥಾನದಿಂದ ಗಜವಾಹನೋತ್ಸವ ವಿದ್ಯಾಪೀಠದವರೆಗೆ ಜರುಗುವುದು. ಭಜನಾ ಮಂಡಳಿಗಳಿಂದ ಭಜನೆ, ಪಲ್ಲಕ್ಕಿ ಉತ್ಸವ ನಂತರ ಗುರುಗಳಿಗೆ ಮಹಾ ಪಂಚಾಮೃತ ಅಭಿಷೇಕ, ಅಲಂಕಾರ ಹಸ್ತೋದಕ, ತೀರ್ಥ ಪ್ರಸಾದ, ಸಾಯಂಕಾಲ ಭಜನೆ, ಪಲ್ಲಕ್ಕಿ ಉತ್ಸವ, ಸ್ವಸ್ತಿ ವಾಚನ, ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ, ವಿದ್ವಾಂಸರಿಂದ ಉಪನ್ಯಾಸ ಮಹಾಮಂಗಳಾರತಿ ಕಾರ್ಯಕ್ರಮ ಜರುಗುವುದು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂರು ದಿನಗಳವರೆಗೆ ನಡೆಯುವ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ವೇದೇಶತೀರ್ಥ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT