ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ | ವೀರಶೈವ ಮಹಾಸಭಾ ಚುನಾವಣೆ: 23 ನಾಮಪತ್ರ ಸಲ್ಲಿಕೆ

Published 5 ಜುಲೈ 2024, 16:03 IST
Last Updated 5 ಜುಲೈ 2024, 16:03 IST
ಅಕ್ಷರ ಗಾತ್ರ

ಚಿತ್ತಾಪುರ: ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ 21 ಸ್ಥಾನಗಳಿಗೆ ಚುನಾವಣೆ ಜುಲೈ 21ರಂದು ನಡೆಯಲಿದ್ದು, ಒಟ್ಟು 23 ಜನರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ವೀರಭದ್ರಪ್ಪ ಹುಮನಾಬಾದ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ನಾಗರಾಜ ಚಂದ್ರಶೇಖರ ಭಂಕಲಗಿ, ಸಿದ್ರಾಮೇಶ್ವರ ಚಂದ್ರಶೇಖರ ಸಜ್ಜನಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯನಿರ್ವಾಹಕ ಮಹಿಳಾ 2 ಸ್ಥಾನಗಳಿಗೆ ವೆಂಕಟಮ್ಮ ಪಾಲಪ, ಕಮಲಾ ಟೋಕಾಪುರ, ರೇಣುಕಾ ಝಳಕಿ, ನಿರ್ಮಲಾ ಭಂಗಿ, ಲಕ್ಷ್ಮಿಬಾಯಿ ಹತ್ತಿ, ಮಂಜುಳಾ ಹೂಗಾರ, ಲಕ್ಷ್ಮಿಬಾಯಿ ಮಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಯನಿರ್ವಾಹಕ ಪುರುಷ 13 ಸ್ಥಾನಗಳಿಗೆ ಚಂದ್ರಶೇಖರ ಬಳ್ಳಾ, ಪ್ರಸಾದ ಅವಂಟಿ, ಬಸವರಾಜ ಪಾಟೀಲ, ರವೀಂದ್ರ ಸಜ್ಜನಶೆಟ್ಟಿ, ಪ್ರಕಾಶ ಹಂಚಿನಾಳ, ಶಾಂತಣ್ಣ ಚಾಳಿಕಾರ, ಆನಂದ ಪಾಟೀಲ, ಮಲ್ಲರೆಡ್ಡಿ ಗೋಪಸೇನ್, ಈಶ್ವರ ಬಾಳಿ, ಬಸವರಾಜ ಕಿರಣಗಿ, ವಿಶ್ವರಾಧ್ಯ ನೆನಕ್ಕಿ, ಸೋಮಶೇಖರ ನಾಲವಾರ, ಬಸವರಾಜ ಸಂಕನೂರ, ನಾಗರಾಜ ಕಡಬೂರ ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರವನ್ನು ಜುಲೈ 8ರಂದು ಮಧ್ಯಾಹ್ನ 3 ಗಂಟೆಯವರೆಗೆ ಹಿಂಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸದಸ್ಯರ ಅವಿರೋಧ ಆಯ್ಕೆ ಖಚಿತ: ವೀರಶೈವ ಮಹಾಸಭಾದ ಕಾರ್ಯನಿರ್ವಾಹಕ ಮಹಿಳಾ ಸ್ಥಾನಗಳು 7 ಇದ್ದು, 7 ಮಹಿಳೆಯರು ಮಾತ್ರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT