ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಂಗಾಧರ ಶಿವಾಚಾರ್ಯ ಲಿಂಗೈಕ್ಯ

Last Updated 12 ಅಕ್ಟೋಬರ್ 2022, 10:57 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದ ಕಾರ್ತಿಕೇಶ್ವರ ಮೂಲಾಧಾರ ಕಟ್ಟಿಮನಿ ಸಂಸ್ಥಾನದ ಪೀಠಾಧಿಪತಿ ವೀರಗಂಗಾಧರ ಶಿವಾಚಾರ್ಯ (48) ಮಂಗಳವಾರ ಲಿಂಗೈಕ್ಯರಾದರು.

ಕೆಲ‌ ತಿಂಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಳಖೇಡ ಮಠದಲ್ಲಿ ಬುಧವಾರ ಮಧ್ಯಾಹ್ನ 3.30 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ವೀರಗಂಗಾಧರ ಶಿವಾಚಾರ್ಯರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮಾಡಬೂಳ ಗ್ರಾಮದವರಾಗಿದ್ದ ವೀರಗಂಗಾಧರ ಶಿವಾಚಾರ್ಯರು, ಸುಮಾರು 30 ವರ್ಷಗಳ ಹಿಂದೆ ಮಳಖೇಡ ಗ್ರಾಮಕ್ಕೆ ಆಗಮಿಸಿದ್ದರು. ಧಾರ್ಮಿಕ ಸೇರಿದಂತೆ ವಿಶೇಷ ಪೂಜಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಸೇಡಂ ತಾಲ್ಲೂಕಿನ ಹಂಗನಳ್ಳಿ ಮತ್ತು ಬಿಜನಳ್ಳಿ, ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ದಾರೂರ, ಬೀದರ್‌ ಜಿಲ್ಲೆಯ ಚೆಂಗಟಾ, ಯಾದಗಿರಿ ಜಿಲ್ಲೆ ಅರಕೇರಾ ಕಡೆಗಳಲ್ಲಿ ಶಾಖಾ ಮಠಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT