ಗುರುವಾರ , ಸೆಪ್ಟೆಂಬರ್ 23, 2021
27 °C

ಬಿಎಸ್‌– 3 ವಾಹನಗಳ ನೋಂದಣಿ ಮಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಈಗಾಗಲೇ ಖರೀದಿ ಮಾಡಿ ನೋಂದಣಿ ಮಾಡಿಕೊಳ್ಳದೇ ಇರುವ ಹಾಗೂ ತಾತ್ಕಾಲಿಕ ನೋಂದಣಿ ಸಂಖ್ಯೆ ಪಡೆದ ಸಾರ್ವಜನಿಕರು ಬಿಎಸ್–3 ಮಾನದಂಡದ ಟ್ರ್ಯಾಕ್ಟರ್, ಟ್ರೈಲರ್, ಹಾರ್ವೆಸ್ಟರ್ ಹಾಗೂ ಕಟ್ಟಡ ಕಾಮಗಾರಿಗೆ ಬಳಸುವ ಕನ್‌ಸ್ಟ್ರಕ್ಷನ್‌ ಇಕ್ವಿಪ್ಮೆಂಟ್‌ ಹೊಸ ವಾಹನಗಳನ್ನು ಕಡ್ಡಾಯವಾಗಿ ಸೆಪ್ಟೆಂಬರ್ 30ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಇಲ್ಲದಿದ್ದಲ್ಲಿ ಅಕ್ಟೋಬರ್ 1 ರಿಂದ ಈ ಮೇಲೆ ಹೇಳಿದ ಬಿಎಸ್–3 ವಾಹನಗಳನ್ನು ಯಾವುದೇ ಕಾರಣಕ್ಕೂ ನೋಂದಣಿ ಮಾಡಲಾಗುವುದಿಲ್ಲ. ಸಾರ್ವಜನಿಕರು ಹಾಗೂ ಅಧಿಕೃತ ವಾಹನ ಮಾರಾಟಗಾರರು ಇದನ್ನು ಗಮನಿಸಬೇಕು.

ಕೇಂದ್ರ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ಅಕ್ಟೋಬರ್ 1ರಿಂದ ಬಿಎಸ್-4 ಟ್ರ್ಯಾಕ್ಟರ್, ಟ್ರೈಲರ್, ಹಾರ್ವೆಸ್ಟರ್ ಹಾಗೂ ಕನ್‌ಸ್ಟ್ರಕ್ಷನ್‌ ಇಕ್ವಿಪ್ಮೆಂಟ್ವಾ ಹನಗಳನ್ನು ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.