ಜಗದೇವಿ ಈರಣ್ಣಗೌಡ ಮಾಲಿಬಿರಾದಾರ (23) ಮೃತ ಯುವತಿ. ಮಳೆಗೆ ನೆನೆದ ತಡೆಗೋಡೆ ಕುಸಿದು ಯುವತಿಯ ಮೇಲೆ ಬಿದ್ದಿದೆ. ಪರಿಣಾಮ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಉಪತಹಶೀಲ್ದಾರ್ ಸತ್ಯಪ್ರಕಾಶ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.