‘ಮಹಿಳಾ ಸಿಬ್ಬಂದಿಗಿಲ್ಲ ಶೌಚಾಲಯ ವ್ಯವಸ್ಥೆ’
ಮಿನಿವಿಧಾನ ಸೌಧದಲ್ಲಿ ಕನಿಷ್ಠ 30ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯು ಈ ಕಟ್ಟಡದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಿನಿವಿಧಾನ ಸೌಧದ ಹಿಂಬದಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು ನೀರಿನ ಸೌಲಭ್ಯವಿಲ್ಲದ್ದಕ್ಕೆ ಬೀಗ ಹಾಕಲಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ವು ವಾತಾವರಣ ಗಲೀಜಾಗಿದೆ. ಕೂಡಲೇ ಸಂಬಂಧಿಸಿದವರು ಶುದ್ಧ ಕುಡಿಯುವ ನೀರಿನ ಆಸನಗಳ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.