ಕಮಲಾಪುರ: 371 (ಜೆ) ವಿಶೇಷ ಸ್ಥಾನಮಾನದಿಂದಾಗಿ ಸರ್ಕಾರದಿಂದ ಅಪಾರ ಪ್ರಮಾಣದ ಅನುದಾನ ಸಿಗುತ್ತಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಹಶೀಲ್ದಾರ್ ಮೋಸಿನ್ ಅಹಮ್ಮದ್ ತಿಳಿಸಿದರು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ತಹಶೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶೈಕ್ಷಣಿಕ ಸಂಸ್ಥೆ, ವಿಶ್ವವಿದ್ಯಾಲಯಗಳು, ಕಿದ್ವಾಯಿ, ಜಯದೇವ ಮತ್ತಿತರ ಹೆಸರಾಂತ ಆರೋಗ್ಯ ಸಂಸ್ಥೆಗಳು ಕಲಬುರಗಿಯಲ್ಲಿ ಸ್ಥಾಪನೆಯಾಗಿವೆ. ಶೈಕ್ಷಣಿಕ ಆರೋಗ್ಯ ದೃಷ್ಟಿಯಿಂದ ಈ ಭಾಗದ ಜನರಿಗೆ ಅತ್ಯಮೂಲ್ಯ ಸೇವೆ ಒದಗಿಸುತ್ತಿವೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಗ್ರೇಡ್ 2 ತಹಶೀಲ್ದಾರ ಶಿವಕುಮಾರ ಶಾಬಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ದೀಪಕ ಶೆಟ್ಟಿ, ಕಮಲಾಕರ, ರಘುನಂದನ ದ್ಯಾಮಣಿ, ಯಲ್ಲಪ್ಪ ಮತ್ತಿತರರು ಇದ್ದರು.