ಕಲಬುರಗಿ: ಮಹಿಳೆ–ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬಲ್ಲದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಜಾ ಸಿ.ವಿ. ಅಭಿಪ್ರಾಯಪಟ್ಟರು.

ನಗರದ ಅಪ್ಪ ಪಬ್ಲಿಕ್ ಶಾಲೆಯ ಬಸವರಾಜ ಅಪ್ಪ ಮೆಮೋರಿಯಲ್ ಹಾಲ್ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ರಾಜ್ಯಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ‘ಸುಭದ್ರೆ ರೇಖೆಗಳು’ ಕವನ ಸಂಕಲನ ಬಿಡುಗಡೆ ಹಾಗೂ ವಿವಿಧ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವುದರ ಮೂಲಕ ತೋರಿಸುತ್ತಿದ್ದಾರೆ. ಶಿವಾಜಿಯ ತಾಯಿ ಜೀಜಾಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕ ಮಹಾದೇವಿ, ಕಲ್ಪನಾ ಚಾವ್ಲಾ ಸೇರಿದಂತೆ ಹಲವು ಮಹಿಳೆಯರು ಇತಿಹಾಸದಲ್ಲಿ ಹೆಸರು ದಾಖಲಿಸಿದ್ದಾರೆ’ ಎಂದರು.

‘ಮಹಿಳೆ ಎಷ್ಟೆಲ್ಲಾ ಸಾಧನೆ ಮಾಡಿದರೂ ಆಕೆಯ ಮೇಲಿನ ಶೋಷಣೆ ನಿಲ್ಲುತ್ತಿಲ್ಲ ಎಂಬುದು ಕಳವಳದ ಸಂಗತಿ. ಕಾನೂನುಗಳ ಅರಿವು ಹೆಣ್ಣುಮಕ್ಕಳಿಗೆ ಇರಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ‘ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಬಹಳ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯವನ್ನು ವಿರೋಧಿಸಬೇಕು. ಭಾರತದಲ್ಲಿ ಮಹಿಳೆಯನ್ನು ಪೂಜ್ಯನೀಯ ಸ್ಥಾನದಲ್ಲಿ ಇಡಲಾಗಿದೆ. ಅವರಿಗೆ ಶಾಸನಸಭೆಗಳಲ್ಲಿ ಶೇ 33 ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿದ್ದಾರೆ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ನೂರಾರು ಮಹಿಳೆಯರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಿದರು. ಬ್ಯಾನರ್ಗಳನ್ನು ಹಿಡಿದು ಮಹಿಳಾ ಪರ ಘೋಷಣೆಗಳನ್ನು ಕೂಗಿದರು.

ಕಲಬುರಗಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸುಭದ್ರಮ್ಮ ಎಂ.ರಾಜೋಳಿ ಅವರು ರಚಿಸಿದ ಕವನ ಸಂಕಲನ ‘ಸುಭದ್ರೆ ರೇಖೆಗಳು’ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ವಿವಿಧ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪ್ರದಾನ ನಡೆಯಿತು.

ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರಮಾ ಆರ್., ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ರವಿಕಾಂತಿ ಕ್ಯಾತನಾಳ, ಜಿಲ್ಲಾ ಹೆಚ್ಚುವರಿ ಸರ್ಕಾರಿ ವಕೀಲೆ ಶರಣಮ್ಮ ಬಿ.ಪಾಟೀಲ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಸುರೇಶ್ ಎಲ್. ಶರ್ಮಾ, ಸುಭಾಶ್ಚಂದ್ರ ಬರ್ಮಾ, ಸದಾನಂದ ಪೆರ್ಲ, ವಿಜಯಕುಮಾರ ತೇಗಲತಿಪ್ಪಿ, ಜ್ಯೋತಿ ಅರುಣಕುಮಾರ ಪಾಟೀಲ, ಸಾಹಿತಿ ವೈ.ಬಿ. ಕಡಕೋಳ, ಮಾಲಾ ಕಣ್ಣಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ನೌಕರರು ಹಾಜರಿದ್ದರು.

ಬಸಯ್ಯಸ್ವಾಮಿ ಹಿರೇಮಠ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಟ್ಟರು. ಚಂದ್ರಕಲಾ ನಂದರಗಿ ಪ್ರಾರ್ಥಿಸಿದರು. ಶಿವಕಾಂತಮ್ಮ ಕಲ್ಲೂರು ಸ್ವಾಗತಿಸಿದರು. ಪೂರ್ವಿ ಪವಾರ ಭರತನಾಟ್ಯ ಗಮನ ಸೆಳೆಯಿತು.

Quote - ಡಾ. ಬಿ.ಆರ್. ಅಂಬೇಡ್ಕರ್ ರಾಜಾರಾಂ ಮೋಹನರಾಯ ಸಾವಿತ್ರಿಬಾಯಿ ಫುಲೆ ಅವರಂತಹ ಮಹನೀಯರಿಂದ ಮಹಿಳೆಯರು ಸಾಂಪ್ರದಾಯಿಕ ಸಂಕೋಲೆಗಳಿಂದ ಬಂಧಮುಕ್ತರಾಗಲು ಸಾಧ್ಯವಾಯಿತು ಶೈಲಜಾ ಸಿ.ವಿ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ

Cut-off box - ‘ಪರಸ್ಪರ ಗೌರವ ಇರಲಿ’ ‘ಸ್ತ್ರೀವಾದ ಎಂದರೆ ಪುರುಷರನ್ನು ದ್ವೇಷಿಸುವುದು ಎಂದಲ್ಲ. ಮಹಿಳಾವಾದ ಬೇಡುವುದು ಪರಸ್ಪರ ಗೌರವವನ್ನು’ ಎಂದು ‘ಪ್ರಜಾವಾಣಿ’ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ‘ಎಲ್ಲ ತನ್ನದೇ ನಡೆಯಬೇಕು ಎಂಬುದೂ ಸ್ತ್ರೀವಾದ ಅಲ್ಲ. ಮಹಿಳೆಯರ ಮಾನ ಮರ್ಯಾದೆ ಎಂಬುದು ಆತ್ಮಗೌರವಕ್ಕೆ ಸಂಬಂಧಿಸಿದ್ದು. ಮಹಿಳೆಯರು ಬಯಸುವುದು ಸಮಾನ ಅಧಿಕಾರ ಹಕ್ಕು’ ಎಂದು ಪ್ರತಿಪಾದಿಸಿದರು. ‘ಮಹಿಳೆ ಜ್ಞಾನಮೂಲ ಸೃಷ್ಟಿಸಿಕೊಳ್ಳಬೇಕು. ಸಂಘಟನೆಯಿಂದ ಬಲಗೊಳ್ಳಬೇಕು. ಈ ಕಾರ್ಯಕ್ರಮಕ್ಕೆ ಬಂದು ತಮ್ಮದೇ ತುತ್ತೂರಿ ಊದುವ ನಾಯಕರನ್ನು ನಂಬಬೇಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.