ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ, ರೇವೂರು(ಬಿ) ಪೊಲೀಸ್ ಠಾಣೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Last Updated 9 ಮಾರ್ಚ್ 2022, 5:38 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣ ಹಾಗೂ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮಹಿಳಾ ದಿನ ಆಚರಿಸಲಾಯಿತು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿದೀಪಾ ನಾಗೇಂದ್ರ ಮುಗಳಿ ಅವರಿಗೆ ಸನ್ಮಾನ ಮಾಡಲಾಯಿತು. ಎಎಸ್‍ಐ ಸಹಕಾರದೊಂದಿಗೆ ಒಂದು ದಿನದ ಎಸ್‍ಎಚ್.ಒ ಹುದ್ದೆ ನಿರ್ವಹಣೆಯ ಜವಾಬ್ದಾರಿ ನೀಡಲಾಯಿತು. ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ಮಾತನಾಡಿದರು.

ಸಿಬ್ಬಂದಿ ಎಎಸ್‍ಐ ರಜೀಯಾ ಬೇಗಂ, ಮಯೂರ, ಚಂದ್ರಕಾಂತ, ಯಲ್ಲಪ್ಪ, ಮಡಿವಾಳಪ್ಪ, ಚಂದ್ರಶಾ ದೇಗನಾಳ, ಸುನೀಲ, ಸತೀಶ, ಸಿದ್ದು ಇದ್ದರು.

ದೇವಲ ಗಾಣಗಾಪುರ: ತಾಲ್ಲೂಕಿನ ದೇವಲ್ ಗಣಗಾಪುರ ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ಪಿಎಸ್ಐ ರಾಜು ರಾಠೋಡ್ ಮಾತನಾಡಿ, ಶ್ರೀಯತಿರಾಜ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ಮೊನಪ್ಪ ಸುತಾರ ಅವರನ್ನು ಠಾಣೆಗೆ ಕರೆಸಿ ಸನ್ಮಾನಿಸಲಾಯಿತು. ಹಾಗೂ ಒಂದು ದಿನದ ಮಟ್ಟಿಗೆ ಠಾಣೆಯ ಪ್ರಭಾರ ಹುದ್ದೆ ನೀಡಿ ಕರ್ತವ್ಯ ನಿರ್ವಹಿಸಲು ತಿಳಿಸಲಾಯಿತು.

ಪಿಎಸ್ಐ ರಾಜು ರಾಠೋಡ್ ,ಪೊಲೀಸ್ ಪೇದೆಗಳಾದ ಗೌರಮ್ಮ, ಪಂಚಾಕ್ಷರಿ,ಸಿದ್ದಣ್ಣ, ಮಲ್ಲಿಕಾರ್ಜುನ್ ಭಾಸಗಿ, ಪ್ರದೀಪ್ ಹಾಗೂ ಯತಿರಾಜ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಹಿಬೂಬ್ ಲಾಲಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT