ಕಲಬುರ್ಗಿ: ‘ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯ ಮತ್ತು ಹಕ್ಕುಗಳ ಬಗ್ಗೆ ಕಟ್ಟಡ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ನಗರದಲ್ಲಿ ಭಾನುವಾರ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಡೆದ ಕಟ್ಟಡ ಕಾರ್ಮಿಕರ ಹಕ್ಕುಗಳ ಸಮಾಲೋಚನೆ ಹಾಗೂ ಬಡಾವಣೆಯ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ದುಡಿಯುವ ವರ್ಗದ ಹಿತಕ್ಕಾಗಿ ಹಲವು ಯೋಜನೆ, ಸೌಲಭ್ಯಗಳಿವೆ. ಬಹಳಷ್ಟು ಕಾರ್ಮಿಕರು ಇವುಗಳು ಅರಿವು ಇಲ್ಲದೇ ತಮ್ಮ ಜೀವನವನ್ನು ಕಷ್ಟದಲ್ಲಿ ಸಾಗಿಸುತ್ತಿದ್ದಾರೆ’ ಎಂದರು.

ಭೀಮರಾಯ ಎಂ. ಕಂದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಿವುಕುಮಾರ ಎಸ್. ಬೆಳಗೇರಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ರಟ್ನಡಗಿ, ಸಹ ಕಾರ್ಯದರ್ಶಿ ಶರಣು ಎ. ಬಳಿಚಕ್ರ, ಖಚಾಂಚಿ ದೇವಿಂದ್ರ ಎಸ್. ಬಳಿಚಕ್ರ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಜಿ. ಮೈತ್ರಿ ಇದ್ದರು.

ಪದಾಧಿಕಾರಿಗಳು: ಮುತ್ತಣ್ಣ (ಅಧ್ಯಕ್ಷ– ರಾಜಾಪುರ), ತಿಮ್ಮಯ್ಯ (ಕಾರ್ಯದರ್ಶಿ), ಸಂತೋಷ (ಅಧ್ಯಕ್ಷ– ಗಾಜಿಪುರ), ಶಂಕರ (ಕಾರ್ಯದರ್ಶಿ), ರಾಜು ಗುತ್ತೇದಾರ (ಅಧ್ಯಕ್ಷ– ಶಿವಾಜಿ ನಗರ), ಶಿವಗಂಡ ಚನ್ನವೀರನಗರ (ಕಾರ್ಯದರ್ಶಿ), ಶ್ರೀಶೈಲ ಸ್ವಾಮಿ (ಅಧ್ಯಕ್ಷ– ಮಹಾದೇವ ನಗರ), ವೀರಣ್ಣ ಗುತ್ತೇದಾರ (ಕಾರ್ಯದರ್ಶಿ) ದೇವಿಂದ್ರಪ್ಪ (ಸೈಯದ್ ಚಿಂಚೋಳಿ), ಜೈ ಭೀಮ ಕಡಿ (ಹೀರಾಪುರ ಅಧ್ಯಕ್ಷ), ಮೌನೇಶ ಹೈಯಾಳಕರ್ (ತಾರಪೈಲ್ ಅಧ್ಯಕ್ಷ), ನಿಂಗಪ್ಪ ಕಂದಳ್ಳಿ (ಕಾರ್ಯದರ್ಶಿ), ವಸಿಂಖಾನ್ (ಅಂಬಿಕಾ ನಗರ ಅಧ್ಯಕ್ಷ), ಇಸ್ಮಾಯಿಲ್ ಶೇಖ್ (ಕಾರ್ಯದರ್ಶಿ) ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.