ಶನಿವಾರ, ಜುಲೈ 2, 2022
25 °C

ಪದಾಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಭಾರತೀಯ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಸಮಿತಿಯ ವಿವಿಧ ಬ್ಲಾಕ್‌ಗಳ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಿ, ಕಾರ್ಮಿಕರ ಬೇಡಿಕೆಗಳಿಗೆ ಹೋರಾಟ ಮಾಡಲಾಗುವುದು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಘೂಳಿ ತಿಳಿಸಿದರು.

ರೈಲ್ವೆ ಇಲಾಖೆಯೂ ಸೇರಿದಂತೆ ಬಹುಪಾಲು ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಡಿಮೆ ಸಂಬಳ ಹಾಗೂ ಅದರ ನಿಗದಿತ ಪಾವತಿ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಘಟನೆಯ ಮೂಲಕ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ರೂಪಿಸಲಾಗುವುದು ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪದಾಧಿಕಾರಿಗಳು ಈ ರೀತಿ ಇದ್ದಾರೆ.

ಅಫಜಲಪುರ ಘಟಕ: ಮಹಾಂತಯ್ಯ ಮಲ್ಲಯ್ಯ ಹಿರೇಮಠ (ಅಧ್ಯಕ್ಷ), ಹೂವಣ್ಣ ಬೀರಣ್ಣ ಕರಗೂಳಿ, ಶರಣಪ್ಪ ಗುರುಶಾಂತಪ್ಪ (ಉಪಾಧ್ಯಕ್ಷರು), ಅಬಿದ್‌ ಅನ್ವರ್‌ ಪಟೇಲ್‌ (ಕಾರ್ಯದರ್ಶಿ), ಶಿವಲಿಂಗ ವಿಠೋಬಾ ಗಾಯಕವಾಡ್‌, ಸಿದ್ರಾಮಪ್ಪ ಶರಣಪ್ಪ ಭೂಂಯಾರ್ (ಸಹ ಕಾರ್ಯದರ್ಶಿಗಳು), ಅಲ್ತಾಫ್‌ ಅಬ್ದುಲ್‌ಕರೀಮ್‌ ತೋಟೆಗಾರ (ಖಜಾಂಚಿ.).

ಕಾಳಗಿ– ಕೋಡ್ಲಿ ಘಟಕ: ಸಂತೋಷ ನರನಾಳ (ಅಧ್ಯಕ್ಷ), ನಾಗಣ್ಣ ಜಮಾದಾರ, ತಾರಾಚಂದ ರಾಠೋಡ (ಉಪಾಧ್ಯಕ್ಷರು), ಮನೋಹರ ಗಂವಾರ್‌ (ಕಾರ್ಯದರ್ಶಿ), ರಾವೂಫ್‌ ಪಟೇಲ್ (ಸಹ ಕಾರ್ಯದರ್ಶಿ), ಸುದ್ದಿ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಕೃಷ್ಣಾ ಸೇರಿ (ಖಜಾಂಚಿ).

ಚಿಂಚೋಳಿ ಘಟಕ: ಸುನೀಲ ದೊಡಮನಿ (ಅಧ್ಯಕ್ಷ), ಬುರಾನ್‌ ಭಟ್ಟ, ಸಂತೋಷ ಪವಾರ (ಉಪಾಧ್ಯಕ್ಷರು), ಜನಾರ್ದನ (ಕಾರ್ಯದರ್ಶಿ), ಬಸವರಾಜ ಕಂಟ್ಲಿ (ಸಹ ಕಾರ್ಯದರ್ಶಿ), ಶಿವಶರಣಪ್ಪ ಪಟರೆಡ್ಡಿ (ಸಂಘಟನಾ ಕಾರ್ಯದರ್ಶಿ), ಅಶೋಕ ಈದಲಾಯಿ (ಖಜಾಂಚಿ).

ಫರಹತಾಬಾದ್‌ ಘಟಕ: ಅಮರೇಶ ಈಶಣ್ಣ ಜಗತಿ (ಅಧ್ಯಕ್ಷ), ರಘುನಾಥ ಬೈಲಪ್ಪ (ಉಪಾಧ್ಯಕ್ಷ), ಮಹ್ಮದ್‌ ಯೂಸೂಫ್‌ ಕಾಸೀಮ್‌ಸಾಬ್‌ (ಕಾರ್ಯದರ್ಶಿ), ಆನಂದ ವಡೆಯಾರ (ಸಹ ಕಾರ್ಯದರ್ಶಿ), ಇಕ್ಬಾಲ್ ಪಟೇಲ್‌ (ಸಂಘಟನಾ ಕಾರ್ಯದರ್ಶಿ), ಮಾಳಿಂಗರಾಯ ಬಸವರಾಜ ಪೂಜಾರಿ (ಖಜಾಂಚಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು