ಬುಧವಾರ, ಆಗಸ್ಟ್ 4, 2021
20 °C
ರೋಗಿಗಳ ಚಿಕಿತ್ಸೆಯ ಮಧ್ಯೆ ಸಸಿಗಳನ್ನು ಬೆಳೆಸುತ್ತಿರುವ ವೈದ್ಯ; ಇದಕ್ಕಾಗಿಯೇ ತಂಡ ರಚನೆ

ಸಸಿಗಳ ಡಾಕ್ಟರ್ ನಾಗನಾಥ ಯಾದ್ಗಿರ್‌!

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋರಂಟಿ ಹನುಮಾನ್‌ ದೇವಸ್ಥಾನದ ಹತ್ತಿರ ಆಯುರ್ವೇದಿಕ್‌ ಕ್ಲಿನಿಕ್‌ ಹೊಂದಿರುವ ಡಾ.ನಾಗನಾಥ ವಿ.ಯಾದ್ಗಿರ್‌ ಅವರಿಗೆ ಜನರು ಪ್ರೀತಿಯಿಂದ ‘ಸಸಿಗಳ ಡಾಕ್ಟರ್‌’ ಎಂದೇ ಕರೆಯುತ್ತಾರೆ.

ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ವೈದ್ಯಕೀಯ ಸೇವೆ ಸಲ್ಲಿಸುವ ಅವರು ಮಧ್ಯಾಹ್ನದ ಬಿಡುವಿನಲ್ಲಿ ಸಸಿಗಳ ಆರೈಕೆಗೆ ಮುಂದಾಗುವ ಕಾರಣ ಈ ಹೆಸರು ಬಂದಿದೆ.

ಜೇಮ್‌ಶೇಡ್‌‌ ನಗರ, ಅಂಬಿಕಾ ನಗರ, ತಾರಫೈಲ್‌ ಬಡಾವಣೆ, ಕರುಣೇಶ್ವರ ನಗರ, ಜೇವರ್ಗಿ ಕಾಲೊನಿ ಹಾಗೂ ಶರಣಸಿರಸಗಿ, ಬೇಲಕೂರು, ರೇವತಗಾಂವ ಮುಂತಾದ ಹಳ್ಳಿಗಳಲ್ಲೂ ಸಸಿ ನೆಟ್ಟು, ಅಕ್ಕಪಕ್ಕದ ಜನರಿಗೆ ಪೋಷಣೆಯ ಜವಾಬ್ದಾರಿ ವಹಿಸಿದ್ದಾರೆ.

ಹಲವು ವರ್ಷಗಳಿಂದ ಸ್ವಯಂ ಪ್ರೇರಣೆಯಿಂದ ಸಸಿ ಪೋಷಣೆಯಲ್ಲಿ ತೊಡಗಿರುವ ಇವರು, ಮೂರು ವರ್ಷಗಳ ಹಿಂದೆ ತಂಡ ಕಟ್ಟಿ, ಇನ್ನಷ್ಟು ಕ್ರಿಯಾಶೀಲಗೊಳಿಸಿದ್ದಾರೆ. ಅವರ ತಂಡಕ್ಕೆ ‘ಕಲ್ಲುನಾಡಿನ ಕಲಿಗಳು’ ಎಂದು ಹೆಸರಿಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹವನ್ನು ಸೇರಿಸಿಕೊಳ್ಳುತ್ತಿದ್ದಾರೆ.

‘ಮುಂಚೆ ಸರ್ಕಾರದಿಂದ ರಿಯಾಯಿತಿಯಲ್ಲಿ ಸಸಿಗಳನ್ನು ಖರೀದಿಸಿ ಅಲ್ಲಲ್ಲಿ ನೆಡುತ್ತಿದ್ದೆವು. ಹಲವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದೆವು. ಈಗ ನಮ್ಮದೇ ನರ್ಸರಿ ನಿರ್ಮಿಸಿ
ಕೊಂಡಿದ್ದೇವೆ. ಕಳೆದ ವರ್ಷ 20 ಸಾವಿರ ಸಸಿಗಳನ್ನು ವಿತರಣೆ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ತಮ್ಮ ಕೆಲಸಕ್ಕೆ ಹೆಗಲಾಗಿ ನಿಂತ ‍ಪತ್ನಿ ಡಾ.ಯಜ್ಞಶ್ರೀ ಹಾಗೂ ಯುವಜನರ ತಂಡದ ಶ್ರಮವನ್ನೂ ಅವರು ನೆನೆಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು