ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಶ್ರೇಯಾಂಕಗೆ ತವರಲ್ಲಿ ಅದ್ದೂರಿ ಸ್ವಾಗತ

Published 3 ಏಪ್ರಿಲ್ 2024, 14:25 IST
Last Updated 3 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ಜೇವರ್ಗಿ(ಕಲಬುರಗಿ ಜಿಲ್ಲೆ): ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರನ್ನು ಸ್ವಗ್ರಾಮ ಕೋಳಕೂರಿನಲ್ಲಿ ಬುಧವಾರ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಶ್ರೇಯಾಂಕ ಮೂಲತಃ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದವರು. ತವರಿಗೆ ಬಂದ ಅವರನ್ನು ಗ್ರಾಮದ ಹೊರವಲಯದಿಂದ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಮೆರವಣಿಗೆ ಬಳಿಕ ಶ್ರೇಯಾಂಕ ಪಾಟೀಲ ಸಿದ್ಧಬಸವೇಶ್ವರರ ದರ್ಶನ ಪಡೆದರು. ಮೆರವಣಿಗೆಯಲ್ಲಿ ಕೋಳಕೂರ ಗ್ರಾಮದ ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT