ಕಲಬುರಗಿ: ‘ನವ ಭಾರತಕ್ಕೆ ಯುವ ಭಾರತದ ಶಕ್ತಿ ಅಗತ್ಯ. ಯುವಜನರಿಂದ ಮಾತ್ರವೇ ಬದಲಾವಣೆ ಸಾಧ್ಯ. ಆದರೆ ಇಂದಿನ ಯುವಜನರು ವೈಭವದ ಜೀವನಕ್ಕೆ ಮುಖ ಮಾಡಿ, ತಾತ್ಕಾಲಿಕ ಅಭಿರುಚಿಗಳಿಗೆ ಬಲಿಯಾಗಿ ತಾರುಣ್ಯದ ಜೀವನದ ಮಹತ್ವವನ್ನೇ ಮರೆಯುತ್ತಿದ್ದಾರೆ’ ಎಂದು ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಗನ್ನಾಥ ತರನಳ್ಳಿ ಕಳವಳ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ನಿರ್ಮಿಸಿದ್ದ ಲಿಂ.ಸಂತೋಷಕುಮಾರ ಇಂಗಿನಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕಲೆ, ಕ್ರೀಡೆ, ಕೃಷಿ, ನಾಡು–ನುಡಿ, ಶಿಕ್ಷಣ, ಸಾಹಿತ್ಯದಲ್ಲಿ ಯುವಜನರ ಪಾತ್ರದ ಕುರಿತು ಬೆಳಕು ಚೆಲ್ಲಿದರು.

‘ತಾರುಣ್ಯವು ಆಕಾಶದ ತಾರೆಗಳನ್ನು ಹಿಡಿದು ತರುವಂಥ ಉತ್ಸಾಹದ ಅವಧಿ. ಈ ವಯಸ್ಸಿನ ಯುವಜನರು ಸಮಾಜ ಎಲ್ಲ ಕ್ಷೇತ್ರಗಳಲ್ಲಿನ ಅಸಹ್ಯ, ಅಡೆ–ತಡೆಗಳು, ಮಾನಸಿಕವಾಗಿ ಬೆಳೆದ ವಿಷವೃಕ್ಷದ ಬೇರುಗಳನ್ನು ಕಿತ್ತೆಸೆದು ಜನರ ಜೀವನ ಹಸನುಗೊಳಿಸುವ ಶಕ್ತಿ ಹೊಂದಿದ್ದಾರೆ’ ಎಂದರು.

‘ಪ್ರಸ್ತುತ ಯುವಜನರು ಮೊಬೈಲ್ ಫೋನ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ದೈಹಿಕ, ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ವ್ಯಸನಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವ ವಯಸ್ಸಿನಲ್ಲೇ ಮುದಿ ಮನಸ್ಸುಗಳಿರುವ ಯುವಜನರನ್ನು ನಾವು ನೋಡುತ್ತಿದ್ದೇವೆ. ಯುವಜನರ ಹಿತ–ಅಭಿರುಚಿಗಳು ಸ್ವಯಂ ಹಿತದೊಂದಿಗೆ ಸಾಮಾಜಿಕ ಹಿತವನ್ನೂ ಒಳಗೊಂಡಿರಬೇಕು’ ಎಂದು ಪ್ರತಿಪಾದಿಸಿದರು.

‘ಯುವ ಜನರು ಅಂಕಗಳಿಗೆ ಓದದೇ ಜ್ಞಾನಕ್ಕಾಗಿ ಓದಿ ಸಂಪನ್ಮೂಲಶಕ್ತಿ ಎನಿಸಿಕೊಳ್ಳಬೇಕು. ಯುವಕರು ಬರೀ ಕಾರ್ಪೊರೇಟ್ ಸಂಸ್ಥೆಗಳ ದುಡಿಮೆಗೆ ಬದುಕು ಸೀಮಿತಗೊಳಿಸದೇ, ಕೃಷಿಯತ್ತಲೂ ಗಮನ ಹರಿಸಬೇಕು. ಯುವ ಸಾಹಿತಿಗಳು ಅವಸರದ ಬರಹಕ್ಕೆ ಒತ್ತು ನೀಡದೇ ಗಟ್ಟಿ ಬರಹಕ್ಕೆ ಗಮನ ನೀಡಬೇಕು. ಯಾವುದೇ ಬರಹಕ್ಕೆ ಆಳ ಅಧ್ಯಯನದ ಬಲವಿರಬೇಕು. ವಿಷಯವನ್ನು ಹೊಸ ದೃಷ್ಟಿಕೋನ ನೋಡುವ, ಸೂಕ್ಷ್ಮ ಸಂವೇದನೆಯಿಂದ ಸ್ಪಂದಿಸುವ ಚಾಕ್ಯತೆ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಲ್ಲಿನಾಥ ನಾಗನಹಳ್ಳಿ, ಗೌರವಾಧ್ಯಕ್ಷರಾದ ಅರುಣಕುಮಾರ ಪಾಟೀಲ, ಅನ್ನಪೂರ್ಣ ಸಂಗೋಳಗಿ ಮಾತನಾಡಿದರು.

ಸಮಾರೋಪ ನುಡಿ: ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದ ಸಾಹಿತಿ ಸಿ.ಎಸ್.ಆನಂದ, ‘ಸಾಹಿತ್ಯ ಸಮ್ಮೇಳನಗಳು ನಿತ್ಯೋತ್ಸವಗಳಾಗಬೇಕು. ಅನುಭವ ಹಂಚಿಕೊಳ್ಳುವ ಸೇತುವೆ ಆಗಬೇಕು. ಧರ್ಮ ಮತ್ತು ರಾಜಕೀಯದ ಬೆಸುಗೆಯಾಗಿರಬೇಕು. ರೊಟ್ಟಿ ನಮ್ಮ ಧರ್ಮ, ಧರ್ಮ ಸಂಸ್ಕೃತಿ ಆಗಬೇಕಾಗಿದೆ. ಸೀಮಾತೀತ ಬದುಕು ಬೇಕು. ಇಂದು ದಾಸರು, ಶರಣರು, ಲಂಕೇಶ ಅವರ ಸಾಹಿತ್ಯದ ಕಲ್ಪನೆಗಳು ಸಾಕಾರಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷರ ಮೆರವಣಿಗೆ; ಸಾಧಕರ ಸನ್ಮಾನ: ಸಮ್ಮೇಳನದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಅಧ್ಯಕ್ಷ ಜಗನ್ನಾಥ ತರನಳ್ಳಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಕನ್ನಡ ಭವನದ ತನಕ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಡೊಳ್ಳು, ಮಕ್ಕಳ ಕೋಲಾಟ, ಹಿರಿಯ ನೃತ್ಯ ಗಮನ ಸೆಳೆಯಿತು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮೇಳನದಲ್ಲಿ ಸತ್ಕರಿಸಲಾಯಿತು.

ಸಮ್ಮೇಳನದ ವಿಚಾರ ವಿಸ್ತಾರ ಗೋಷ್ಠಿಯಲ್ಲಿ ಕಲ್ಯಾಣರಾವ ಪಾಟೀಲ ಅವರು ‘ವರ್ತಮಾನದ ತಲ್ಲಣಗಳಿಗೆ ಸಾಹಿತ್ಯದ ಸೂತ್ರಗಳು’, ಕಾವ್ಯಶ್ರೀ ಮಹಾಗಾಂವಕರ ಅವರು ‘ಜನಜನಾಂಗದ ಕಣ್ಣು ತೆರೆಸುವ ಕವಿ,ಕಾವ್ಯ, ಕೃತಿಗಳು’ ಹಾಗೂ ಮಹೇಶ ಕುಲಕರ್ಣಿ ಅವರು ‘ಸಮ್ಮೇಳನಾಧ್ಯಕ್ಷರ ಬದುಕು ಬರಹ’ ಕುರಿತು ಬೆಳಕು ಚೆಲ್ಲಿದರು. ಅರುಣಕುಮಾರ ಲಗಶೆಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಯುವ ಕವಿಗೋಷ್ಠಿಯಲ್ಲಿ 15ಕ್ಕೂ ಅಧಿಕ ಯುವ ಕವಿಗಳು ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಕವನ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು. ಶ್ರೀಶೈಲ ನಾಗರಾಳ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

‘ಆರ್ಥಿಕ ಬಲಕ್ಕೆ ಕಾಯ್ದೆ ರೂಪಿಸಲಿ’

‘ಕನ್ನಡ ಸಾಹಿತ್ಯ ಪರಿಷತ್ ಸ್ವಾವಲಂಬಿ ಆಗಬೇಕಾದರೆ ಸರ್ಕಾರ ಕಸಾಪ ಜಿಲ್ಲಾ ತಾಲ್ಲೂಕು ಘಟಕಗಳಿಗೆ ಆರ್ಥಿಕ ನೆರವು ನೀಡಬೇಕು. ಇಲ್ಲವೇ ನಗರ ಸ್ಥಳೀಯ ಸಂಸ್ಥೆಗಳ ಅನುದಾನ ಶಾಸಕ–ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯ ಒಂದಿಷ್ಟು ಪಾಲು ಈ ಘಟಕಗಳಿಗೆ ಕಡ್ಡಾಯವಾಗಿ ವಿನಿಯೋಗಿಸುವ ನಿಟ್ಟಿನಲ್ಲಿ ಸರ್ಕಾರ ಕಾಯ್ದೆ ಜಾರಿಗೊಳಿಸಬೇಕು’ ಎಂದು ಸಮ್ಮೇಳನಾಧ್ಯಕ್ಷ ಜಗನ್ನಾಥ ತರನಳ್ಳಿ ಆಗ್ರಹಿಸಿದರು.

‘ಅರಳುವ ಸಾಹಿತ್ಯ ಬೇಕಿದೆ’

‘ಸಾಹಿತ್ಯ ರಂಗದಲ್ಲಿ ಅಗಾಧ ಬದಲಾವಣೆ ಆಗಿದೆ. ಹಿಂದಿನ ಸಾಹಿತ್ಯ ಭಾವನೆಗಳನ್ನು ಅರಳಿಸುತ್ತಿತ್ತು. ಇಂದಿನ ಸಾಹಿತ್ಯ ಭಾವನೆಗಳನ್ನು ಕೆರಳಿಸುತ್ತಿದೆ’ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಹೇಳಿದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸಾಮಾಜಿಕ ಜಾಲತಾಣಗಳು ಇಂದಿನ ವಿಚಿತ್ರ ಘಟನೆಗಳು ನಮ್ಮನ್ನು ವಿಚಲಿತರನ್ನಾಗಿಸಿವೆ. ಅದರೊಂದಿಗೆ ಸಾಹಿತ್ಯವೂ ಕಲುಷಿತಗೊಂಡಿದೆ. ನಮಗೆ ಕೆರಳಿಸುವ ಸಾಹಿತ್ಯ ಬೇಡವಾಗಿದೆ. ಭಾವನೆಗಳನ್ನು ಅರಳಿಸಿ ಆ ಮೂಲಕ ಜೀವನ ಕಟ್ಟಿಕೊಡುವ ಸಾಹಿತ್ಯ ಬೇಕಾಗಿದೆ’ ಎಂದರು.

ಮಾರ್ಗದರ್ಶನದ ಕೊರತೆಯಿಂದ ಯುವಜನರು ಅಡ್ಡದಾರಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಸಾಹಿತ್ಯದತ್ತ ಮುಖ ಮಾಡಿಸುವುದು ಈ ಯುವ ಸಾಹಿತ್ಯ ಸಮ್ಮೇಳನದ ಉದ್ದೇಶ
-ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷ

ಯುವಕರೇ ದೇಶದ ಬೆನ್ನೆಲುಬು ಆದರೂ ಹಿರಿಯರು ಇಲ್ಲದೇ ಕಿರಿಯರು ಇಲ್ಲ. ಹಿರಿಯರ–ಕಿರಿಯರ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಸಾಹಿತ್ಯ ಕಸಾಪ ಸಮಾಜ ಮಾಡಬೇಕಿದೆ
-ಮಲ್ಲಿನಾಥ ತಳವಾರ, ಯುವ ಸಮ್ಮೇಳನದ ನಿಟಕಪೂರ್ವ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.