ಮಂಗಳವಾರ, ಜೂನ್ 22, 2021
22 °C

ಜಿಲ್ಲಾ ಪಂಚಾಯಿತಿ: ಆಡಳಿತ ಮಂಡಳಿ ಅವಧಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿಯ ಜಿಲ್ಲಾ ಪಂಚಾಯಿತಿಯ ಪ್ರಸಕ್ತ ಆಡಳಿತ ಮಂಡಳಿಯ ಅಧಿಕಾರದ ಅವಧಿ ಕೊನೆಗೊಂಡಿದೆ.

ಕೊರೊನಾ ಹಾವಳಿ ಕಾರಣ ರಾಜ್ಯದಲ್ಲಿ ಆರು ತಿಂಗಳು ಚುನಾವಣೆ ನಡೆಸುವುದು ಬೇಡ ಎಂದು ಚುನಾವಣಾ ಆಯೋಗವನ್ನು ಕೋರಿರುವ ರಾಜ್ಯ ಸರ್ಕಾರ,  ಅವಧಿ ಪೂರ್ಣಗೊಂಡಿರುವ ಜಿಲ್ಲಾ ಪಂಚಾಯಿತಿಗಳಿಗೆ ಆಯಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿದೆ.

‘2016 ಮೇ 7ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷಳಾಗಿ ಅಧಿಕಾರ ವಹಿಸಿಕೊಂಡು, 2021ರ ಮೇ 6ರವರೆಗೂ ಐದು ವರ್ಷ ಪೂರ್ಣಗೊಳಿಸಿದ್ದೇನೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಶಾಲೆ, ಪಶು ಚಿಕಿತ್ಸಾಲಯ, ಅಂಗನವಾಡಿ ಕಟ್ಟಡ, ಶೌಚಾಲಯಗಳು ಹಾಗೂ ಇನ್ನಿತರ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ನಿರ್ಗಮಿತ ಅಧ್ಯಕ್ಷೆ ಸುವರ್ಣಾ ಮಲಾಜಿ ತಿಳಿಸಿದ್ದಾರೆ.

‘2016ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನರೇಗಾದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು ಹೆಮ್ಮೆಯ ವಿಷಯ. ಈ ಅವಧಿಯಲ್ಲಿ ವಿಶೇಷವಾಗಿ ರೈತರ ಜಮೀನಿನಲ್ಲಿ ಕಲ್ಲುಗಳು ಆಯ್ದು ಬದುಗಳಿಗೆ ಹಾಕುವ ಯೋಜನೆ ವಿಶಿಷ್ಟವಾಗಿತ್ತು. ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂತೆ ಕಟ್ಟೆಗಳ ನಿರ್ಮಾಣ, ಆಹಾರ ಧಾನ್ಯ ಶೇಖರಣೆಗೆ ಸಾಕಷ್ಟು ಗೋದಾಮುಗಳ ನಿರ್ಮಾಣ ಸಹ ಮಾಡಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು