ಗುಲ್ಬರ್ಗ: ಜಿಲ್ಲಾ ವ್ಯಾಪ್ತಿಯಲ್ಲಿರುವ ಯಾವುದೇ ಸರ್ಕಾರಿ ಕಚೇರಿ, ಬ್ಯಾಂಕು, ವಿವಿಧ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೆ, ಈ ಸುಸ್ವರ ನಿಮಗೆ ಕೇಳಿಸುತ್ತದೆ. ಗುಲ್ಬರ್ಗ ಜಿಲ್ಲಾಡಳಿತವು ತನ್ನ ಅಂತರ್ಜಾಲ ತಾಣ (ವೆಬ್ಸೈಟ್)ದಲ್ಲಿ ನೀಡಿರುವ ದೂರವಾಣಿ ಸಂಖ್ಯೆಗಳನ್ನು ನಂಬಿಕೊಂಡವರು ಈ ತಾಪತ್ರಯ ಅನುಭವಿಸುತ್ತಿದ್ದಾರೆ.

ಗುಲ್ಬರ್ಗದಲ್ಲಿರುವ ಜನರಿಗೆ ಇದರಿಂದಾಗುವ ತೊಂದರೆ ಕಡಿಮೆ. ಆದರೆ ಜಿಲ್ಲೆಯ ಹೊರಭಾಗದಿಂದ ಅಥವಾ ಗುಲ್ಬರ್ಗ ಗ್ರಾಮೀಣ ಭಾಗದಿಂದ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸುವ ಅಗತ್ಯವಿದ್ದವರು ಪೇಚಿಗೆ ಸಿಲುಕಿಕೊಳ್ಳುವ ಸ್ಥಿತಿ ಇದೆ.

ಮೊಬೈಲ್, ಕಂಪ್ಯೂಟರ್ ಬಳಕೆ ವ್ಯಾಪಕವಾಗಿರುವುದರಿಂದ ಸಾಕಷ್ಟು ಜನರು ಇಂಟರ್ನೆಟ್ ಮೂಲಕವೇ ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ದೂರವಾಣಿ ಸಂಖ್ಯೆ ಸಂಗ್ರಹಿಸುತ್ತಾರೆ. ಗುಲ್ಬರ್ಗ ಜಿಲ್ಲಾಡಳಿತ ಎಷ್ಟು ಚೆನ್ನಾಗಿ ದೂರವಾಣಿ ಸಂಖ್ಯೆಗಳ ಪಟ್ಟಿ ನೀಡಿದೆ ಎಂದುಕೊಂಡು ಮುದ್ರಿಸಿಕೊಂಡು ಸಂಗ್ರಹಿಸಿಕೊಳ್ಳುವವರು ಇದ್ದಾರೆ.

ಅದರಲ್ಲಿನ ಸಂಖ್ಯೆಗಳನ್ನು ಬಳಸುತ್ತಾ ಹೋದಂತೆ ಅವು ಕೆಲಸಕ್ಕೆ ಬಾರದ ಸಂಖ್ಯೆಗಳು ಎಂಬುದು ಮನದಟ್ಟಾಗಿ ಜನರು ಶಾಪ ಇಡಲಾರಂಭಿಸುತ್ತಾರೆ.

2008ರಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಎಷ್ಟೊಂದು ಬದಲಾವಣೆಯಾಗಿದೆ. ಕನಿಷ್ಠ ದೂರವಾಣಿ ಸಂಖ್ಯೆಗಳಾದರೂ ಬದಲಾಗಿವೆ ಎಂಬುದರ ಅರಿವು ಜಿಲ್ಲಾಡಳಿತದ ಅಂತರ್ಜಾಲ ತಾಣ ನಿರ್ವಹಿಸುತ್ತಿರುವ ಮಹಾಶಯರಿಗೆ ಗೊತ್ತಿದ್ದಂತಿಲ್ಲ.

ಮಿನಿ ವಿಧಾನಸೌಧದಲ್ಲಿನ ಇಲಾಖೆಗಳ ದೂರವಾಣಿ ಸಂಖ್ಯೆಗಳನ್ನು ಬಹುತೇಕ ಸರಿಯಾಗಿ ಹಾಕಲಾಗಿದೆ. ಇನ್ನುಳಿದಂತೆ ಶೇ. 80ರಷ್ಟು ದೂರವಾಣಿ ಸಂಖ್ಯೆಗಳು ಚಾಲ್ತಿಯಲ್ಲಿ ಇಲ್ಲ. `ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಯಾರೂ ಪ್ರಶ್ನಿಸಬಾರದು.

ಜನರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಯೋಚಿಸದ ಅಧಿಕಾರಿಗಳು, ತಮ್ಮ ಅನುಕೂಲವೊಂದನ್ನೇ ನೋಡಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರಿ ಕಚೇರಿಯ ದೂರವಾಣಿ ಸಂಖ್ಯೆಗಳನ್ನು ಸರಿಯಾಗಿ ನೀಡುವುದಿಲ್ಲ~ ಎನ್ನುತ್ತಾರೆ ಶಹಾಪುರದ ಎ.ಎಂ. ಪಟೇಲ್.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ!: ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿರುವ ಪ್ರಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಭೀಮಣ್ಣ ಕುರಕುಂದಿ. ಅಂತರ್ಜಾಲ ತಾಣದ ಸೌಲಭ್ಯವಿರುವ ಹೊರದೇಶ ಅಥವಾ ಹೊರರಾಜ್ಯಗಳಲ್ಲಿ ವಾಸಿಸುತ್ತಿರುವ ಜನರಿಗೆ ಇದುವೇ ಸತ್ಯ. ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ ಎಂಬುದು ವಾಸ್ತವ ಸತ್ಯ.

ಸಾಯಿಬಣ್ಣ ನಂತರ ಆಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿ ಹೆಸರು ಹೊಂದುವ ಸೌಭಾಗ್ಯವಂತು ಮುಗಿದುಹೋಗಿದೆ. ಈಗಿರುವ ಜಿಪಂ ಅಧ್ಯಕ್ಷರು ಈ ಬಗ್ಗೆ ಗಮನಹರಿಸಿ ಪ್ರಶ್ನಿಸಿದರೆ ಮಾತ್ರ ಅಂತರ್ಜಾಲ ತಾಣಕ್ಕೆ ಅವರ ಹೆಸರು ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಬಹುದು. ಇದರಿಂದ ಹೊರಗಿನ ಜನರಿಗೂ ಒಂದಿಷ್ಟು ನಿಜ ಮಾಹಿತಿ ದೊರಕಿದಂತಾಗುತ್ತದೆ.

ಇ-ಗವರ್ನಮೆಂಟ್ ಆಗುವುದ್ಯಾವಾಗ?: ರಾಜ್ಯ ಸರ್ಕಾರ ವಿವಿಧ ಇಲಾಖೆಗಳನ್ನು `ಇ-ಗವರ್ನಮೆಂಟ್~ ಅನುಷ್ಠಾನಗೊಳಿಸುವ ಮೂಲಕ ಕಾಗದ ಬಳಕೆಯನ್ನು ಕಡಿಮೆ ಮಾಡುತ್ತಿದೆ. ಅಲ್ಲದೆ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಕಚೇರಿಗಳ ಪ್ರತಿಯೊಂದು ಆಗುಹೋಗುಗಳನ್ನು ಅಂತರ್ಜಾಲ ತಾಣಗಳ ಮೂಲಕ ಅಳವಡಿಸಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿವೆ.

ತಂತ್ರಜ್ಞಾನ ಇಷ್ಟೊಂದು ಹತ್ತಿರಕ್ಕೆ ಬಂದಿದೆ. ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ಕೆಲಸಗಳನ್ನೆ ಗುಲ್ಬರ್ಗ ಜಿಲ್ಲಾಡಳಿತ ಮಾಡುತ್ತಿಲ್ಲ. ಮಾಹಿತಿ `ಅಪಡೇಟ್~ ಮಾಡಲು ಪ್ರತ್ಯೇಕ ವಿಭಾಗಗಳು ಇವೆ.

ಹೀಗಿದ್ದರೂ ಹಳಸಿದ ಮಾಹಿತಿ, ಕೆಲಸಕ್ಕೆ ಬಾರದ ದೂರವಾಣಿ ಸಂಖ್ಯೆಗಳನ್ನೆ ಜಿಲ್ಲಾಡಳಿತದ ಅಂತರ್ಜಾಲ ತಾಣ ಹೇರಿಕೊಂಡು ನಿಂತಿದೆ.

ಈಗಾಲಾದರೂ ಪರಿಸ್ಥಿತಿ ಸುಧಾರಿಸಿ ನಿಜ ಮಾಹಿತಿ ಹಾಗೂ ಸರಿಯಾದ ದೂರವಾಣಿ ಸಂಖ್ಯೆಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕೆಂಬ ಆಶಯ ನಾಗರಿಕರದು.
ಜಿಲ್ಲಾಡಳಿತ ವೆಬ್ಸೈಟ್: www.gulbarga.nic.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.