ಗುಲ್ಬರ್ಗ: ಐದನೇ ದಿನವಾದ ಸೋಮವಾರವೂ ಎಲ್.ಪಿ.ಜಿ. (ಗ್ಯಾಸ್) ಸಾಗಿಸುವ ಟ್ಯಾಂಕರ್ಗಳ ಮುಷ್ಕರ ಮುಂದುವರಿದಿದ್ದು, ಇದೀಗ ಗುಲ್ಬರ್ಗ ನಗರದ ಎಲ್ಪಿಜಿ ಗ್ರಾಹಕರಿಗೂ ಮುಷ್ಕರದ ಬಿಸಿ ತಗುಲಿದೆ.

ಮುಖ್ಯವಾಗಿ ಹಿಂದುಸ್ತಾನ ಪೆಟ್ರೋಲ್ (ಎಚ್ಪಿ) ಹಾಗೂ ಭಾರತ ಗ್ಯಾಸ್ ಗ್ರಾಹಕರು `ಗ್ಯಾಸ್ ಟ್ರಬಲ್~ ಎದುರಿಸುತ್ತಿದ್ದಾರೆ. ಸುಮಾರು 20 ದಿನಗಳ ಹಿಂದೆ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ, ಮುಷ್ಕರ ಆರಂಭಗೊಂಡ ಮೂರನೇ ದಿನದವರೆಗೂ ಅನಿಲ ಸಿಲಿಂಡರ್ ಕೆಲವರಿಗೆ ತಲುಪಿದೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿದ ಗ್ರಾಹಕರ ಸಮಸ್ಯೆ ಹೇಳತೀರದಾಗಿದೆ.

ಗುಲ್ಬರ್ಗ ನಗರವೊಂದರಲ್ಲೆ ಸುಮಾರು 90 ಸಾವಿರ ಎಲ್ಪಿಜಿ ಗ್ರಾಹಕರಿದ್ದಾರೆ. ಎಚ್ಪಿ ಹಾಗೂ ಭಾರತ್ ಗ್ಯಾಸ್ ಗ್ರಾಹಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ಯಾಸ್ಗಾಗಿ ಸ್ನೇಹಿತರ ಮನೆಗೆ, ಸಂಬಂಧಿಕರ ಮನೆಗೆ ಅಲೆದಾಡುವ ಪರಿಸ್ಥಿತಿ ಕೆಲವರಿಗೆ ಒದಗಿದೆ.

ಎಲ್ಪಿಜಿ ಕಿಟ್ ಅಳವಡಿಸಿಕೊಂಡಿದ್ದ ಆಟೋ ಸವಾರರೂ ಗ್ಯಾಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಕೆಲವು ಗ್ರಾಹಕರು, ದುಬಾರಿ ಬೆಲೆ ಕೊಟ್ಟು ಎಲ್ಪಿಜಿ ಗ್ಯಾಸ್ ಪೂರೈಸುವ ಖಾಸಗಿ ಕಂಪೆನಿಗಳಿಂದ ಗ್ಯಾಸ್ ಪಡೆಯುತ್ತಿದ್ದಾರೆ.

ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್ಗಳ ಮೂಲಕ ಎಚ್ಪಿ ಗ್ಯಾಸ್ ಪೂರೈಕೆಯಾಗುತ್ತಿತ್ತು. ಧಾರವಾಡದಲ್ಲಿ ಅದನ್ನು ಸಿಲಿಂಡರ್ಗೆ ತುಂಬಿಸಿ (ಬಾಟ್ಲಿಂಗ್) ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ರವಾನಿಸಲಾಗುತ್ತಿತ್ತು. ಭಾರತ ಗ್ಯಾಸ್ ಕೂಡಾ ಬಹುತೇಕ ರಸ್ತೆ ಸಂಚಾರದ ಟ್ಯಾಂಕರ್ಗಳಲ್ಲಿ ಗ್ಯಾಸ್ ಸಾಗಿಸುತ್ತಿರುವುದರಿಂದ ಈ ಕಂಪೆನಿಯ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ.

ಇಂಡೇನ್ ಗ್ಯಾಸ್ ಮಾತ್ರ ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಪೂರೈಸುವ ಕೊಳವೆಮಾರ್ಗ ಹೊಂದಿದೆ. ಅಲ್ಲಿಂದ ಬಹುತೇಕ ಸ್ಥಳಗಳಿಗೆ ರೈಲುಗಳ ಮುಖಾಂತರವೇ ಗ್ಯಾಸ್ ರವಾನಿಸುತ್ತಿದೆ. ಗುಲ್ಬರ್ಗ ನಗರಕ್ಕೆ ಬೆಳಗಾವಿಯ ಸಂಕೇಶ್ವರ ಸಮೀಪದ ಬಾಟ್ಲಿಂಗ್ ಕೇಂದ್ರದಿಂದ ಸಿಲಿಂಡರ್ ಪೂರೈಕೆಯಾಗುತ್ತಿತ್ತು.

ಆದರೆ, ಬೆಳಗಾವಿಯಿಂದ ಸಂಕೇಶ್ವರಕ್ಕೆ ಟ್ಯಾಂಕರ್ಗಳ ಮೂಲಕವೇ ಗ್ಯಾಸ್ ರವಾನಿಸಬೇಕಿತ್ತು. ಅಲ್ಲಿಯೂ ತೊಂದರೆಯಾಗಿರುವುದರಿಂದ, ಇದೀಗ ಇಂಡೇನ್ ಗ್ಯಾಸ್ ಕಂಪೆನಿಯು ಆಂಧ್ರಪ್ರದೇಶದಿಂದ ಗುಲ್ಬರ್ಗಕ್ಕೆ ಗ್ಯಾಸ್ ಸಿಲಿಂಡರ್ಗಳನ್ನು ರವಾನಿಸುತ್ತಿದೆ.

`ಹದಿನೈದು ದಿನ ಹಿಂದೆಯೇ ಸಿಲಿಂಡರ್ ಬುಕ್ ಮಾಡಿದ್ದೆ. ಇಲ್ಲಿಯವರೆಗೂ ಸಿಲಿಂಡರ್ ಕೊಟ್ಟಿಲ್ಲ. ಮನೆಯಲ್ಲಿನ ಗ್ಯಾಸ್ ಇನ್ನೆರಡು ದಿನದಲ್ಲಿ ಮುಗಿಯುತ್ತದೆ, ಏನು ಮಾಡುವುದೆಂದು ಹೊಳೆಯುತ್ತಿಲ್ಲ. ಕಟ್ಟಿಗೆ ಒಲೆ ಹಚ್ಚಿ ಅಡುಗೆ ಮಾಡುವ ಸ್ಥಿತಿ ಬರಬಹುದು~ ಎಂದು ಅಳಲು ತೋಡಿಕೊಂಡರು ಎಚ್.ಪಿ. ಗ್ಯಾಸ್ ಗ್ರಾಹಕಿ, ಸಂತ್ರಾಸವಾಡಿ ನಿವಾಸಿ ಸುಧಾ ಗುತ್ತೇದಾರ.

`ಸರ್ಕಾರ ಆದಷ್ಟು ಬೇಗನೆ ಈ ಸಮಸ್ಯೆ ಬಗೆ ಹರಿಸಬೇಕು. ಹಿಂದಿನ ತಿಂಗಳು ಮುಷ್ಕರ ಮಾಡಿದಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಮತ್ತೆ ಮುಷ್ಕರದ ಸುದ್ದಿ ಕೇಳಿ ಮತ್ತಷ್ಟು ಆತಂಕ ಪಡುವಂತಾಗಿದೆ. ಸಿಟಿಗಳ ಮನೆಯಲ್ಲಿ ಸೌದಿ ಒಲೆ ಇರುವುದಿಲ್ಲ. ಹಳ್ಳಿಯಾದರೆ ನಡೆದು ಹೋಗುತ್ತದೆ~ ಎಂದು ಮಿನಿವಿಧಾನಸೌಧದಲ್ಲಿ ನೌಕರಿ ಮಾಡುವ ಸಿದ್ರಾಮ ಕಳವಳ ವ್ಯಕ್ತಪಡಿಸಿದರು.

`ಪೆಟ್ರೋಲಿಯಂ ಇಂಧನದ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧ ಪಟ್ಟಿರುವುದರಿಂದ ಅಲ್ಲಿಯೇ ಆ ಸಮಸ್ಯೆ ಬಗೆಹರಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ~ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಜಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.