ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು ಚೆಲುವೆಲ್ಲ ತಂದೆಂದಿತು...

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ ಮೊಹರ್ ಊರಲ್ಲಿ ಈಗ ಹೂವುಗಳದ್ದೇ ಕಂಪು. ಸೂರ್ಯ ನಗರಿಯಲ್ಲಿ ಸುರಿದ ಮುಂಗಾರಿಗೆ ನೆಲದಲ್ಲಿ ಹಸಿರು ಮೂಡಿದರೆ, ನಗರದ ಸಾರ್ವಜನಿಕ ಉದ್ಯಾನ ರಸ್ತೆಯಲ್ಲಿ  ಹೂವು ಗಿಡಗಳ ಮಾರಾಟವೂ ಜೋರಾಗಿದೆ.  

ಮಳೆಗಾಲವು ಸಸ್ಯಪ್ರೇಮಿಗಳ ಸ್ವರ್ಗದ ಸಮಯ. ಯಾವುದೇ ಸಸಿ ನೆಟ್ಟರೂ ಚಿಗುರಿ ಬೆಳೆದು ನಿಲ್ಲುವ ಸಂದರ್ಭ. ಈ ಮಾಸದಲ್ಲೇ ಫೈಜುದ್ದೀನ್ ನಗರದಲ್ಲಿ ಸಸಿ ಮಾರಾಟದಲ್ಲಿ ತೊಡಗುತ್ತಾರೆ. `ಹಲವು ವರ್ಷಗಳಿಂದ ಸಸಿ ಮಾಡಿ ಮಾರಾಟ ಮಾಡುವುದು ನನ್ನ ಜೀವನ. ಈ ಹಿಂದೆಗಿಂತಲೂ ಈಗ ಹೆಚ್ಚು ಸಸಿಗಳು ಮಾರಾಟವಾಗುತ್ತಿವೆ. ಕೆಲವೊಂದು ಸಸಿಗಳನ್ನು ಕಸಿ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್‌ಮುಂತಾದ ಕಡೆಗಳಿಂದ ತರಿಸಿದ ಸಸ್ಯಗಳೂ ಮಾರಾಟಕ್ಕಿವೆ' ಎಂದು ಹೇಳಿದರು.

ಗೊಬ್ಬರ-ಕುಂಡ: `ಹಿಂದೆ ಹೂವು -ಹಣ್ಣುಗಳ ಸಸಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸಸಿಗಳಿಗೆ ಹಾಕುವ ಗೊಬ್ಬರ, ಪ್ಲಾಸ್ಟಿಕ್ ಹಾಗೂ ಮಣ್ಣಿನ ಕುಂಡಗಳನ್ನು ಮಾರಾಟ ಮಾಡುತ್ತಿದ್ದೇನೆ' ಎಂದರು.  

ಸಸಿಗಳ ವೈವಿಧ್ಯ: ಬಟನ್ ಗುಲಾಬಿ, ಗಿಲೇಟರ್ ರೋಜ್, ಬೆಂಗಳೂರು ರೋಜ್, ಜೆರ್ಬೆರಾ, ಕ್ರೋಟನ್, ಸ್ಟಾರ್‌ಲೈಟ್, ಬ್ಲಾಕ್ ಫೈರಸ್, ಗೋಲ್ಡನ್ ಸ್ಟಾರ್‌ಲೈಟ್, ಷೋ ಪ್ಲಾಂಟ್, ಮೋರ್ ಪಂಕ್, ಕ್ರಿಸ್‌ಮಸ್ ಟ್ರೀ, ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ನಂದಿಬಟ್ಲು, ದಾಸವಾಳ, ಕಣಗಿಲೆ, ಸೇವಂತಿ, ಟೇಬಲ್ ರಾಜ್, ಸ್ವಸ್ತಿಕ್ ಹೂ ಹೀಗೆ ಹಲವು ಸಸ್ಯ    ವೈವಿಧ್ಯಗಳು ಇಲ್ಲಿವೆ.

ಹಣ್ಣಿನ ಗಿಡಗಳು: ಆರ್.ಕೆ. ಪಾಮ್, ತೆಂಗು, ಮಾವು, ಚಿಕ್ಕು, ದಾಳಿಂಬೆ, ಮೋಸಂಬಿ, ಸಂತ್ರಿ, ಅಂಜೂರ, ಪೇರಳೆ(ಸೀಬೆ), ಪಪ್ಪಾಯಿ, ಬಾದಲ್ ಗಿಡ, ರೆಗ್‌ಜೋರಾ ಮುಂತಾದ ಕಡಿಮೆ ಸಮಯದಲ್ಲಿ ಹಣ್ಣು ನೀಡುವ ಗಿಡಗಳೂ ಇಲ್ಲಿವೆ. ತುಳಸಿ,  ನುಗ್ಗೆ, ಲೋಳೆಸರ (ಅಲೋವೆರಾ), ಅಶೋಕ ಗಿಡ ಹೀಗೆ ಹಲವು ಔಷಧೀಯ ಹಾಗೂ ಆಹಾರದ  ಪ್ರಬೇಧಗಳಿಗೂ ಇಲ್ಲಿ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT