ಬುಧವಾರ, ಸೆಪ್ಟೆಂಬರ್ 29, 2021
20 °C

ನನಗೆ ಹಾರ– ತುರಾಯಿಗಳು ಬೇಡ, ಕನ್ನಡ ಪುಸ್ತಕ ಕೊಡಿ: ಸಚಿವ ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನನ್ನು ಅಭಿನಂದಿಸಲು ಬರುವವರು ಹಾರ– ತುರಾಯಿಗಳನ್ನು ತರುವುದು ಬೇಡ, ಏನಾದರೂ ಕೊಡಲೇಬೇಕು ಎಂದಿದ್ದರೆ, ಒಂದು ಕನ್ನಡ ಪುಸ್ತಕವನ್ನು ಖರೀದಿಸಿ ತಂದು ಕೊಡಿ’ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

‘ನೀವು ಕೊಟ್ಟ ಪುಸ್ತಕವನ್ನು ಕಾರ್ಕಳದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ. ಇದರಿಂದ ನನ್ನ ಮತ ಕ್ಷೇತ್ರದ ಜ್ಞಾನ ದಾಹಿಗಳಿಗೆ ಪ್ರಯೋಜನ ಆಗುತ್ತದೆ’ ಎಂದು ಹೇಳಿದ್ದಾರೆ.

ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳನ್ನು ನೀಡಬಾರದು. ಅದರ ಬದಲಿಗೆ ಒಂದು ಕೆ.ಜಿ ‘ಕಾರ್ಲ ಕಜೆ’ ಎಂಬ ಸ್ಥಳೀಯ ತಳಿಯ ಕೆಂಪು ಅಕ್ಕಿಯನ್ನು ನೀಡುವಂತೆ ಸಲಹೆ ನೀಡಿ, ಅಕ್ಕಿಯನ್ನು ಕೊಡುಗೆಯಾಗಿ ನೀಡುವ ಪರಿಪಾಠ ಆರಂಭಿಸಿದರು.  ಅಲ್ಲದೆ, ಈ ಬಾರಿ ಮುಂಗಾರು ಆರಂಭದಲ್ಲಿ ಕಾರ್ಕಳ ಮೂಲದ ಬಿಳಿ ಬೆಂಡೆ ಬೀಜವನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿ ಅದನ್ನು ಎಲ್ಲರೂ ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದರು.

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನ ಸಚಿವರೂ ಆಗಿರುವ ಸುನಿಲ್, ಎರಡು ವರ್ಷಗಳ ಕಾಲ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ... Covid-19 Karnataka Update: 1,805 ಹೊಸ ಪ್ರಕರಣ, 36 ಮಂದಿ ಸಾವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು