ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಗಾಳಿ–ಮಳೆಗೆ ಧರೆಗುರುಳಿದ ಬಾಳೆ ಬೆಳೆ

Published 16 ಮೇ 2024, 13:35 IST
Last Updated 16 ಮೇ 2024, 13:35 IST
ಅಕ್ಷರ ಗಾತ್ರ

ವಿರಾಜಪೇಟೆ: ಕಳೆದ ಕೆಲ ದಿನಗಳಿಂದ ವಿರಾಜಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗಾಳಿ ಮಳೆಗೆ ಬಾಳೆ ಗಿಡಗಳಿಗೆ ಹಾನಿಯಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಸಮೀಪದ ಮಗ್ಗುಲ ಗ್ರಾಮದ ರೈತ ಚೋಕಂಡ ಮಾದಪ್ಪ ಅವರು ಬೆಳೆದ ಫಸಲು ಬಿಟ್ಟು ಕಟಾವಿನ ಹಂತದಲ್ಲಿದ್ದ 1,200 ಬಾಳೆ ಗಿಡಗಳು ಗಾಳಿ ಮಳೆಗೆ ಧರೆಗುರುಳಿವೆ. ಈ ಕುರಿತು ಮಾತನಾಡಿದ ಚೋಕಂಡ ಮಾದಪ್ಪ ಅವರು, ಸಾಲ ಮಾಡಿ ಬಾಳೆಯನ್ನು ಕಷ್ಟಪಟ್ಟು ಬೆಳೆಸಿದ್ದೇವೆ. ಕೆಲ ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಾಗಿತ್ತು. ಇದೀಗ ಬಾಳೆ ಗಿಡಗಳು ಧರೆಗೆ ಉರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಿದ್ದ ಬಾಳೆಯನ್ನು ಇನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎಂದು ಅಳಲನ್ನು ತೋಡಿಕೊಂಡರು.

ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ಅವರು ಈ ಸಂದರ್ಭ ಮನವಿ ಮಾಡಿದರು.

ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಗೆ ಗ್ರಾಮದ ಚೋಕಂಡ ಮಾದಪ್ಪ ಎಂಬುವರು ಬೆಳೆದ ಬಾಳೆ ಗಿಡಗಳು ಧರೆಗುರುಳಿವೆ
ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಗೆ ಗ್ರಾಮದ ಚೋಕಂಡ ಮಾದಪ್ಪ ಎಂಬುವರು ಬೆಳೆದ ಬಾಳೆ ಗಿಡಗಳು ಧರೆಗುರುಳಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT