ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ: ಘಮ ಘಮಿಸುವ ಆಟಿ ಖಾದ್ಯ ಸಂಭ್ರಮ

ಗೌಡ ಸಮಾಜದಿಂದ ಆಟಿ ಹಬ್ಬ ಆಚರಣೆ
Published : 14 ಆಗಸ್ಟ್ 2024, 4:42 IST
Last Updated : 14 ಆಗಸ್ಟ್ 2024, 4:42 IST
ಫಾಲೋ ಮಾಡಿ
Comments

ಕುಶಾಲನಗರ: ಘಮ ಘಮಿಸುವ ಆಟಿಸೊಪ್ಪು ಪತ್ರೊಡೆ, ಆಟಿಹಲ್ವ, ಆಟಿ ಪಾಯಸ, ಕಜ್ಜಾಯ, ಆಟಿ ಸೊಪ್ಪಿನ ಕಾಫಿ, ಜ್ಯೂಸ್ ಹೀಗೆ ಆಟಿಸೊಪ್ಪಿನಿಂದ ತಯಾರಿಸಿದ ಬಗೆ ಬಗೆಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರು ತರಿಸುತ್ತಿದ್ದವು. 

ಪಟ್ಟಣದಲ್ಲಿ ಗೌಡ ಸಮಾಜ ಏರ್ಪಡಿಸಿದ್ದ ಆಟಿ ಹಬ್ಬವನ್ನು ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ಮಹಿಳೆಯರು ಆಟಿ ಸೊಪ್ಪಿನಿಂದ ಸಿದ್ಧಪಡಿಸಿದ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಆಟಿ ಸಂಭ್ರಮದ ಅಂಗವಾಗಿ ಸೊಪ್ಪಿನಿಂದ ಸುಮಾರು 20ಕ್ಕೂ ಹೆಚ್ಚು ಉತ್ಪನ್ನಗಳನ್ನು ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಗೌಡ ಸಮಾಜದ ಆವರಣದಲ್ಲಿ ಒಪ್ಪವಾಗಿ ಜೋಡಿಸಿದ್ದರು.

ಆಟಿಸೊಪ್ಪು ಪತ್ರೊಡೆ, ಆಟಿ ಹಲ್ವ, ಆಟಿ ಪಾಯಸ, ಮೀನುಸಾರು, ಹಲಸಿನ ಹಣ್ಣು, ಕಜ್ಜಾಯ, ಆಟಿಸೊಪ್ಪಿನ ಪಡ್ಡು, ಕಾಳುಸಾರು, ಆಟಿಸೊಪ್ಪಿನ ಹಲ್ವಾ, ಕೇಕ್, ಮೀನುಕೆತ್ತಿ ಫ್ರೈ, ಮತ್ತು ಕಳಲೆ, ಅಟಿಸೊಪ್ಪಿ ತುಪ್ಪ, ಕಡುಬು, ಚತ್ತಿಸೊಪ್ಪುಟ್ಟು ಪ್ರಮುಖವಾಗಿ ಗಮನ ಸೆಳೆದವು.

ಕಾರ್ಯಕ್ರಮ ಉದ್ಘಾಟಿಸಿದ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ‘ಇಂದಿನ ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯಲ್ಲಿ ತುಂಬಾ ಬದಲಾವಣೆಯಾಗಿದೆ. ಫಾಸ್ಟ್ ಫುಡ್, ಬೇಕರಿ ತಿನಿಸುಗಳಿಗೆ ಯುವ ಜನಾಂಗ ಮಾರುಹೋಗಿದೆ. ಇದರಿಂದ ಆರೋಗ್ಯದ ಮೇಲೆ‌ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಹಿಂದಿನ ಕಾಲದ ಆಹಾರ ಪದ್ಧತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಹಾಗೂ ಆರೋಗ್ಯರ ಜೀವನ ತಮ್ಮದಾಗಿಸಿಕೊಳ್ಳಬೇಕು’ ಎಂದರು.

ಈ ಸಂದರ್ಭ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಚಿಣ್ಣಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಸೂದನ ಗೋಪಾಲ್, ಮಹಿಳಾ ಒಕ್ಕೂಟದ ಅಧ್ಯಕ್ಷ ಚೀಯಂಡಿ ಶಾಂತಿ, ನಿರ್ದೇಶಕರಾದ ಚೆರಿಯಮನೆ ಋಷಿ ಮುಖಂಡರಾದ ಪೋರಯ್ಯನ ನಾಗವೇಣಿ ಸೂದನ ಲೀಲಾವತಿ, ಪಟ್ಟಂದಿ ಬೀನಾ ಸೀತಾರಾಂ ಪಾಲ್ಗೊಂಡಿದ್ದರು.

ಕುಶಾಲನಗರ ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳೆಯರು ಆಟಿ ಸೋಪ್ಪಿನಿಂದ ಸಿದ್ಧಪಡಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದರು
ಕುಶಾಲನಗರ ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳೆಯರು ಆಟಿ ಸೋಪ್ಪಿನಿಂದ ಸಿದ್ಧಪಡಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT