ಬುಧವಾರ, ಅಕ್ಟೋಬರ್ 23, 2019
24 °C
ಮಡಿಕೇರಿ ತಾಲ್ಲೂಕಿನ ಕೆ‌.ನಿಡುಗಣೆ ಗ್ರಾಮ

ಎ.ಸಿ.ಬಿ ಅಧಿಕಾರಿಗಳಿಂದ ಎಸ್‌.ಮೂರ್ತಿ ಜಮೀನು ಪರಿಶೀಲನೆ 

Published:
Updated:

ಮಡಿಕೇರಿ: ವಿಧಾನ‌ಸಭೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಸ್.ಮೂರ್ತಿ ಅವರಿಗೆ ಸೇರಿದ ಆಸ್ತಿಯನ್ನು ಎ.ಸಿ.ಬಿ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು. ‌

ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳ ತಂಡವು, ಮೂರ್ತಿ ಮಾಲೀಕತ್ವದ ಗದ್ದೆ, ಕಾಫಿ ತೋಟದ ಜಮೀನನ್ನು ಮಹಜರು ಮಾಡಿ, ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಯಿತು.

ಬೆಳಗಾವಿಯಲ್ಲಿ 2016 ಹಾಗೂ 17ನೇ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪದ ಮೇಲೆ ಎಸ್.ಮೂರ್ತಿ ಅವರನ್ನು ಅಮಾನತು ಮಾಡಲಾಗಿತ್ತು. ಅಕ್ರಮದ ತನಿಖೆ ನಡೆಸಲು ಐವರು ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)