ಕುಶಾಲನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆ ಹಾಗೂ ಯೋಜನೆಯ ವಲಯ ಒಕ್ಕೂಟ, ವಿವಿಧ ಸಮಿತಿಗಳ ಸಹಕಾರದೊಂದಿಗೆ ಸ್ವಸ್ಥ ಸಮಾಜದ ಪರಿಕಲ್ಪನೆಯೊಂದಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಮದ್ಯವರ್ಜನ ಶಿಬಿರವನ್ನು ಜುಲೈ ಎರಡನೇ ವಾರದಲ್ಲಿ ಕುಶಾಲನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಇಲ್ಲಿನ ಕೊಡವ ಸಮಾಜ ಮಂದಿರದ ಸಭಾಂಗಣದಲ್ಲಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಕುರಿತು ಮಾಹಿತಿ ನೀಡಿದರು.ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿದರು. ಜಿಲ್ಲಾ ಜನಜಾಗತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ, ಕೊಡವ ಸಮಾಜದ ಅಧ್ಯಕ್ಷ ಮನುನಂಜುಂಡ, ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ದೇವರಾಜ, ಕನ್ನಡ ರಕ್ಷಣಾ ವೇದಿಕೆ ಧನರಾಜ್, ಭೂಮಿಕಾ ಮಹಿಳಾ ವೇದಿಕೆ ಫಿಲೋಮಿನಾ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಹಿರಿಯ ಉದ್ಯಮಿ ರಾಮದಾಸ್, ವೇದಿಕೆ ಸದಸ್ಯರಾದ ಸುರೇಶ್, ಪೂರ್ಣಿಮಾ, ಚಂದ್ರಮೋಹನ್ ಚಂದ್ರು, ರಾಜಶೇಖರ್ ಇದ್ದರು.

ಸಮಿತಿ ರಚನೆ: ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನು ನಂಜುಂಡ ಹಾಗೂ ಗೌರವಾಧ್ಯಕ್ಷ ಪುಂಡರೀಕಾಕ್ಷ ಅವರನ್ನು ಆಯ್ಕೆ ಮಾಡಲಾಯಿತು.

ಸೋಮವಾರಪೇಟೆ ತಾಲ್ಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಸ್ವಾಗತಿಸಿದರು. ಕುಶಾಲನಗರ ವಲಯ ಮೇಲ್ವಿಚಾರಕ ನಾಗರಾಜ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.