ಮಡಿಕೇರಿ: ರಾಜ್ಯಸರ್ಕಾರದ ಮಹತ್ವದ ಮರುವಿನ್ಯಾಸಗೊಳಿಸಿದ ಯೋಜನೆ ‘ಆಶಾಕಿರಣ’ಕ್ಕೆ ಜುಲೈ 3ರಂದು ಚಾಲನೆ ಸಿಗಲಿದ್ದು, ಕೊಡಗು ಜಿಲ್ಲೆಯೂ ಈ ಯೋಜನೆ ವ್ಯಾಪ್ತಿಗೆ ಸೇರಿದೆ. ಈ ಯೋಜನೆಯಡಿ ಈಗಾಗಲೇ 8 ಕಡೆ ದೃಷ್ಟಿಕೇಂದ್ರಗಳನ್ನು ಆರಂಭಿಸಿರುವ ಆರೋಗ್ಯ ಇಲಾಖೆ ‘ಆ್ಯಪ್’ ಮೂಲಕ ಉಚಿತ ಕನ್ನಡಕ ವಿತರಣೆಗೆ ಸಜ್ಜಾಗಿದೆ.

ಇದುವರೆಗೂ ಕೇವಲ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮಾತ್ರವೇ ದೃಷ್ಟಿದೋಷದ ಪರೀಕ್ಷೆ ನಡೆಯುತ್ತಿತ್ತು. ಉಚಿತವಾಗಿ ಕನ್ನಡಕ ವಿತರಿಸಲಾಗುತ್ತಿತ್ತು. ಆದರೆ, ಇದರಲ್ಲಿ ಪಾರದರ್ಶಕತೆ ತರಲು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೇ ದೃಷ್ಟಿದೋಷ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಜಿಲ್ಲಾಕೇಂದ್ರ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ), ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆ, ನಾಪೋಕ್ಲು, ಕುಶಾಲನಗರ, ಶನಿವಾರಸಂತೆ, ಸಿದ್ದಾಪುರ, ಗೋಣಿಕೊಪ್ಪಲುವಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ದೃಷ್ಟಿಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲೆಲ್ಲ ಒಬ್ಬರು ನೇತ್ರ ಸಹಾಯಕರು ಇದ್ದು, ದೃಷ್ಟಿಪರೀಕ್ಷೆ ನಡೆಸಿ, ದೃಷ್ಟಿ ಸಮಸ್ಯೆ ಇದ್ದರೆ ಉಚಿತವಾಗಿ ಕನ್ನಡಕ ವಿತರಿಸಲಿದ್ದಾರೆ. ಒಂದು ವೇಳೆ ಕಣ್ಣಿನ ಕಾಯಿಲೆಗಳು ಕಂಡು ಬಂದಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಾರೆ ಎಂದು ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೂ ಪಾಲಿಬೆಟ್ಟ ಮತ್ತು ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೃಷ್ಟಿಕೇಂದ್ರ ತೆರೆಯುವುದು ಬಾಕಿ ಇದೆ.

ಜುಲೈ 3ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ‘ಆಶಾಕಿರಣ’ ಯೋಜನೆಗೆ ಚಾಲನೆ ನೀಡಲಿದ್ದು, ರಾಜ್ಯದಲ್ಲಿ 393 ದೃಷ್ಟಿಕೇಂದ್ರಗಳನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಈ ಆಶಾಕಿರಣ ಯೋಜನೆ ಹೊಸದಲ್ಲ. 2022ರಲ್ಲೇ ಇದು ಆರಂಭವಾಗಿತ್ತು. ಆಗ 8 ಜಿಲ್ಲೆಗಳಲ್ಲಿ ಮಾತ್ರ ಮನೆಮನೆಗೆ ತೆರಳಿ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಗಿತ್ತು. ಆದರೆ, ಈಗ ಈ ಯೋಜನೆಯನ್ನೇ ಮರುವಿನ್ಯಾಸಗೊಳಿಸಿ, ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ದೃಷ್ಟಿದೋಷ ಇರುವವರು ಸಮೀಪದ ತಾಲ್ಲೂಕು ಆಸ್ಪತ್ರೆ ಸಮುದಾಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಉಚಿತವಾಗಿ ದೃಷ್ಟಿಪರೀಕ್ಷೆ ಮಾಡಿಸಿಕೊಂಡು ಕನ್ನಡಕ ಪಡೆಯಬಹುದು

–ಡಾ.ಕೆ.ಎಂ.ಸತೀಶ್ಕುಮಾರ್ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ.

ಕೊಡಗು ಜಿಲ್ಲೆಯಲ್ಲಿ 8 ದೃಷ್ಟಿಕೇಂದ್ರಗಳನ್ನು ತೆರೆಯಲಾಗಿದೆ. ಉಚಿತ ಪರೀಕ್ಷೆ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು

–ಡಾ.ಆನಂದ್ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ.

ಆ್ಯಪ್ ಮೂಲಕವೇ ಕನ್ನಡಕ ವಿತರಣೆ!

ದೃಷ್ಟಿಪರೀಕ್ಷೆ ಮತ್ತು ಕನ್ನಡಕ ವಿತರಣೆಯಲ್ಲಿ ಪಾರದರ್ಶಕತೆ ಬರಲಿ ಎಂಬ ಕಾರಣಕ್ಕೆ ‘ಸ್ಪೆಕ್ಟಿಕಲ್ ಡಿಸ್ಟ್ರಿಬ್ಯೂಷನ್ ಆ್ಯಪ್’ ಅನ್ನು ರೂಪಿಸಲಾಗಿದೆ. ನೇತ್ರ ಪರೀಕ್ಷೆ ಮಾಡುತ್ತಿರುವ ಚಿತ್ರ ಹಾಗೂ ಅವರು ಕನ್ನಡಕ ಹಾಕಿಕೊಂಡಿರುವ ಚಿತ್ರ ಎರಡನ್ನೂ ಆ್ಯಪ್ನಲ್ಲಿ ಅಪ್ಲೋಡ್ ಮಾಡಲೇ ಬೇಕಿದೆ. ಇದರಿಂದ ದೃಷ್ಟಿಪರೀಕ್ಷೆ ಮತ್ತು ಕನ್ನಡಕ ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ.

ಏಪ್ರಿಲ್ನಿಂದ 1111 ಮಂದಿಯಲ್ಲಿ ದೃಷ್ಟಿದೋಷ ಪತ್ತೆ!

ಈ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಚಟುವಟಿಕೆಗಳು ಆರಂಭವಾಗಿವೆ. ಏಪ್ರಿಲ್ನಿಂದ ಇಲ್ಲಿಯವರೆಗೆ ಒಟ್ಟು ಇಲ್ಲಿಯವರೆಗೆ 4750 ಮಂದಿಯ ದೃಷ್ಟಿಪರೀಕ್ಷೆ ಮಾಡಲಾಗಿದೆ. ಇವರಲ್ಲಿ 1111 ಮಂದಿಯಲ್ಲಿ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. ಆ್ಯಪ್ ಮೂಲಕ 851 ಮಂದಿ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 114 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.