ಮಡಿಕೇರಿ: ಆ. 12ರಿಂದ 3 ದಿನಗಳ ಕಾಲ ಇಲ್ಲಿನ ಬಾಲಭವನದಲ್ಲಿ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಎಂ.ಉಮಾದೇವಿ ತಿಳಿಸಿದರು.

‘ಮೊದಲ ದಿನ ನಾವು ಪ್ರತಿಭಟನಾ ಜಾಥಾ ಮಾಡಲು ಅನುಮತಿ ಕೇಳಿದ್ದೇವೆ. ಆದರೆ, ಪೊಲೀಸರು ನಮಗೆ ಇನ್ನೂ ಅನುಮತಿ ನೀಡಿಲ್ಲ. ರಾಜ್ಯವ್ಯಾಪಿ ಜಿಲ್ಲಾಮಟ್ಟದಲ್ಲಿ ಅಹೊರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಮಡಿಕೇರಿಯಲ್ಲಿ ಮಳೆ ಇರುವ ಕಾರಣ ಮೂರೂ ದಿನಗಳ ಕಾಲ ಪ್ರತಿಭಟನಾ ಸಮಾವೇಶವನ್ನಷ್ಟೇ ನಡೆಸಲಾಗುವುದು’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ಪ್ರತಿ ತಿಂಗಳೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ₹ 10 ಸಾವಿರ ಗೌರವ ಧನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಸರ್ಕಾರ ಹೊರಡಿಸುತ್ತಿರುವ ಆದೇಶಗಳು ಕಾರ್ಯಕರ್ತೆಯರಿಗೆ ದಿಗಿಲು ಹುಟ್ಟಿಸಿವೆ. ಈಗ ಸಾವಿರ ಸಂಖ್ಯೆಗೆ ಕಡಿಮೆ ಇರುವ ಆಶಾ ಕಾರ್ಯಕರ್ತೆಯರ ಪಟ್ಟಿ ಮಾಡಲಾಗುತ್ತಿದೆ. ಕಾರ್ಯಕರ್ತೆಯರ ಕೆಲಸ ಮೌಲ್ಯಮಾಪನವನ್ನೂ ನಡೆಸಲಾಗುತ್ತಿದೆ. ಕೂಡಲೇ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

‘ತಾವು ಕಾರ್ಮಿಕರು ಹಾಗೂ ರೈತರ ಪರ ಎಂದು ಹೇಳಿಕೊಂಡು ಬಂದ ಕಾಂಗ್ರೆಸ್ ಸರ್ಕಾರವೇ ಹೀಗೆ ವರ್ತಿಸಿರುವುದು ಸರಿಯಲ್ಲ’ ಎಂದು ಖಂಡಿಸಿದ ಅವರು, ‘ಈ ಮೂರು ದಿನಗಳ ಕಾಲದ ಪ್ರತಿಭಟನೆಗೂ ಸರ್ಕಾರ ಕಿವಿಗೊಡದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ ಬಸಪ್ಪ ಮಾತನಾಡಿ, ‘ಆಶಾ ಕಾರ್ಯಕರ್ತೆಯರೆಲ್ಲರೂ ಬಡವರೇ ಆಗಿದ್ದಾರೆ. ಇವರಿಗೆ ವಿಪರೀತ ಕೆಲಸ ನೀಡಿ, ಕ್ಷೇತ್ರ ಕಾರ್ಯವನ್ನೂ ಇವರ ಕೈಯಲ್ಲೇ ನಡೆಸಿ, ಈಗ ಕನಿಷ್ಠ ಗೌರವಧನವನ್ನೂ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಕೆ.ಎಂ.ನಾಗಮಣಿ ಮಾತನಾಡಿ, ‘ನಿವೃತ್ತರಾದ ಆಶಾ ಕಾರ್ಯಕರ್ತೆಯರು ಬರಿಗೈಯಲ್ಲಿ ಹೋಗಬೇಕಾದ ಸ್ಥಿತಿ ಇದೆ. ನಮಗೆ ಸೂಕ್ತ ಇಡುಗಂಟು ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ಶಾಂತಿ, ಅನಿತಾ, ಶ್ರೀಮತಿ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಬಾಲಭವನದಲ್ಲಿ ಆ. 12, 13, 14ರಂದು ಪ್ರತಿಭಟನಾ ಸಮಾವೇಶ | 12ರಂದು ಪ್ರತಿಭಟನಾ ಮೆರವಣಿಗೆ ಮೂರೂ ದಿನಗಳ ಕಾಲ ಕೆಲಸ ಸ್ಥಗಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.