ಗುರುವಾರ , ಏಪ್ರಿಲ್ 9, 2020
19 °C

ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಮರಿ ಜನನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗೋಣಿಕೊಪ್ಪಲು: ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ (52) ಸೋಮವಾರ ಬೆಳಿಗ್ಗೆ ಹೆಣ್ಣು ಮರಿಗೆ ಜನ್ಮ ನೀಡಿದೆ.

15 ವರ್ಷಗಳಿಂದ ಶಿಬಿರದಲ್ಲಿರುವ ವರಲಕ್ಷ್ಮಿ ಹಿಂದೆಯೂ ಎರಡು ಮರಿಗಳಿಗೆ ಜನ್ಮ ನೀಡಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮೈಸೂರು ದಸರಾದ ಗಜಪಡೆಯಲ್ಲಿಯೂ ವರಲಕ್ಷ್ಮಿ ಪಾಲ್ಗೊಂಡಿತ್ತು. ಆನೆ ಮರಿ ಆರೋಗ್ಯಕರವಾಗಿದೆ ಎಂದು ಹುಣಸೂರು ವನ್ಯ ಜೀವಿ ವಿಭಾಗದ ವನ್ಯಜೀವಿ ವೈದ್ಯಾಧಿಕಾರಿ ಮುಜಿಬ್ ರೆಹಮನ್ ತಿಳಿಸಿದ್ದಾರೆ.

ಆನೆ ಮರಿ ಮತ್ತು ತಾಯಿ ಆನೆಯನ್ನು ಶಿಬಿರದ ಇತರ ಆನೆಗಳು ಮಧ್ಯದಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿವೆ. ಪುಟಾಣಿ ಮರಿ ತಾಯಿಯ ಒಡಲಲ್ಲಿ ಓಡಾಡಿಕೊಂಡಿದೆ.

ವರಲಕ್ಷ್ಮಿ ಆನೆ ಮಾವುತ ರವಿ ಆನೆಗೆ ಬೇಕಾದ ಆಹಾರ ಮತ್ತಿತರ ವಸ್ತುಗಳನ್ನು ಎಚ್ಚರಿಕೆಯಿಂದ ಕೊಡುತ್ತಿದ್ದಾನೆ. ವರಲಕ್ಷ್ಮಿ ಆನೆಯೊಂದಿಗೆ ಯೋಗ ಲಕ್ಷ್ಮಿ ಆನೆ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು