ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ. 18ರಿಂದ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟ: ನಾಪೋಕ್ಲಿನಲ್ಲಿ ಮತ್ತೊಂದು ಕ್ರೀಡಾ ಕಲರವ

Published 14 ಏಪ್ರಿಲ್ 2024, 7:11 IST
Last Updated 14 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಕಿ ಉತ್ಸವದ ರಂಗು ಕಳೆಗಟ್ಟುತ್ತಿದ್ದಂತೆ ಮತ್ತೊಂದು ಕ್ರೀಡಾ ಉತ್ಸವಕ್ಕೆ ನಾಲ್ಕುನಾಡು ಸಜ್ಜಾಗುತ್ತಿದೆ. ಏ. 18ರಿಂದ ಮೂರು ದಿನಗಳ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಟೂರ್ನಿ ನಡೆಯಲಿದೆ.

ಸುಮಾರು 150 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ. ಇಲ್ಲಿನ ಕೆಪಿಎಸ್ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಟೂರ್ನಿ ನಡೆಯಲಿದೆ.

ಹಾಕಿ ಟೂರ್ನಿ ಒಂದೆಡೆ ಕ್ರೀಡಾಸಕ್ತರನ್ನು ಆಕರ್ಷಿಸಿದರೆ, ಮತ್ತೊಂದೆಡೆ ಹಗ್ಗ ಜಗ್ಗಾಟದ ರಂಗು ಮೈದಾನದಲ್ಲಿ ತುಂಬಲಿದೆ.ಕೊಡವ ಕುಟುಂಬಗಳ ನಡುವಿನ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ- 2024ರ ಸ್ಪರ್ಧೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು ನೂರಾರು ಕೊಡವ ಕುಟುಂಬಗಳು ಪಾಲ್ಗೊಳ್ಳಲಿವೆ.

ಏ. 18ರಿಂದ 21ರವರೆಗೆ ಆಯೋಜಿಸಲಾಗಿದ್ದು ಮಹಿಳಾ ಮತ್ತು ಪುರುಷರ ತಂಡಗಳು ಪಾಲ್ಗೊಳ್ಳಲಿವೆ. 2022ರಲ್ಲಿ ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಮೊದಲ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು, 2023ರಲ್ಲಿ ಟಿ.ಶೆಟ್ಟಿಗೇರಿಯ ಚೆಟ್ಟಂಡ ಕುಟುಂಬಸ್ಥರು ಎರಡನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಿದ್ದು ಇದೀಗ ಮೂರನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಗೆ ಸಕಲ ಸಿದ್ಧತೆಗಳನ್ನು ಬೊಟ್ಟೋಳಂಡ ಕುಟುಂಬ ಮಾಡಿಕೊಳ್ಳುತ್ತಿದೆ. ಹಗ್ಗ ಜಗ್ಗಾಟ ಸ್ಪರ್ಧಾ ಕಾರ್ಯಕ್ರಮದಂದು ಬೆಳಿಗ್ಗೆ ನಾಪೋಕ್ಲು ಪಟ್ಟಣದಿಂದ ಆಟದ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ನಾಲ್ಕು ನಾಡಿನ ಮಂದಿಯನ್ನು ಮತ್ತೊಂದು ಕ್ರೀಡಾಕೂಟ ರಂಜಿಸಲಿದೆ. ಕುಟುಂಬ- ಕುಟುಂಬಗಳ ನಡುವೆ ಲೇ.. ಲೇ.. ಲೈಸಾ.. ಎಂಬ ಶಕ್ತಿ ಪ್ರದರ್ಶನದ ಹಗ್ಗ ಜಗ್ಗಾಟ ಸ್ಪರ್ಧೆ ಭರಪೂರ ಮನೋರಂಜನೆ ನೀಡಲಿದೆ’ ಎಂದು ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ಹೇಳಿದರು.

ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟ ಕ್ರೀಡಾಕೂಟದ ಖಜಾಂಚಿಯಾಗಿ ರಮೇಶ್ ಮೊಣ್ಣಯ್ಯ ,ರವಿ ಕರುಂಬಯ್ಯ,ಕಾರ್ಯದರ್ಶಿಯಾಗಿ ಚೇತನ್, ಸಹ ಕಾರ್ಯದರ್ಶಿಯಾಗಿ ಪಳಂಗಪ್ಪ, ಖಜಾಂಚಿ ರಮೇಶ್ ಪೊನ್ನಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಪೋಕ್ಲು ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಟೂರ್ನಿಗಾಗಿ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಈಚೆಗೆ ಭೂಮಿಪೂಜೆಯನ್ನು ನೆರವೇರಿಸಿದರು
ನಾಪೋಕ್ಲು ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಟೂರ್ನಿಗಾಗಿ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಈಚೆಗೆ ಭೂಮಿಪೂಜೆಯನ್ನು ನೆರವೇರಿಸಿದರು
ಬೊಟ್ಟೋಳಂಡ ಮಿಟ್ಟು ಪೂಣಚ್ಚ.
ಬೊಟ್ಟೋಳಂಡ ಮಿಟ್ಟು ಪೂಣಚ್ಚ.

‘ಕೊಡವ ಕುಟುಂಬಗಳ ನಡುವಿನ ಬಲಾಬಲಗಳನ್ನು ಪ್ರದರ್ಶಿಸಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಅದರೊಂದಿಗೆ ಕುಟುಂಬಗಳ ನಡುವಿನ ಪರಸ್ಪರ ಸ್ನೇಹ, ಸಾಮರಸ್ಯಕ್ಕೂ ನಾಂದಿಯಾಗಲಿದೆ. ಜಿಲ್ಲೆಯಲ್ಲಿ ಕೊಡವ ಹಾಕಿ ಉತ್ಸವದಂತೆ ಹಗ್ಗಜಗ್ಗಾಟ ಕ್ರೀಡೆಯೂ ಪ್ರಸಿದ್ಧಿ ಹೊಂದಬೇಕು’ ಎಂದರು ಕ್ರೀಡಾ ಸಮಿತಿ ಸಂಚಾಲಕ, ಬೊಟ್ಟೋಳಂಡ ಮಿಟ್ಟು ಪೂಣಚ್ಚ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT