ಬುಧವಾರ, ಜನವರಿ 22, 2020
21 °C

ಅಪಘಾತ: ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಇಲ್ಲಿನ ಬೈಚನಹಳ್ಳಿಯಲ್ಲಿ ಸರ್ಕಾರಿ ಬಸ್ ಹಾಗೂ ಸ್ಕೂಟರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ 6 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಪೃಥ್ವಿ(6ವರ್ಷ) ಮೃತ ಬಾಲಕ.  ಗೊಂದಿಬಸವನಹಳ್ಳಿಯ ನಿವಾಸಿ ಪರಮೇಶ್ವರ್ ಮತ್ತು ಗೀತಾ ದಂಪತಿ ಪುತ್ರ.

ಘಟನೆ ವಿವರ : ಪರಮೇಶ್ ಅಯ್ಯಪ್ಪ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬರುತ್ತಿದ್ದ ಸ್ಕೂಟರ್‌ಗೆ ಸರ್ಕಾರಿ ಬಸ್‌ ಡಿಕ್ಕಿ ಹೊಡೆದಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರು  ರಸ್ತೆ ಮೇಲೆ ಬಿದ್ದರೆ, ಮಗು ಮಾತ್ರ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆಯಿತು.

ಘಟನೆ ನಡೆದ ತಕ್ಷಣ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಮೃತ ಮಗುವಿನ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತು. ಸ್ಥಳಕ್ಕೆ ಸಂಚಾರಿ ಪೋಲೀಸ್ ಠಾಣಾಧಿಕಾರಿ ಅಚ್ಚಮ್ಮ ಹಾಗೂ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಪೊಲೀಸರು ಸುಗಮಗೊಳಿಸಿದರು.
ಈ ಕುರಿತು ಕುಶಾಲನಗರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು,  ಸರ್ಕಾರಿ ಬಸ್ಸಿನ ಚಾಲಕನನ್ನು ವಶಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು