ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಧ್ವಜ ಸ್ತಂಭ ತೆರವಿಗೆ ವಿರೋಧ

Published 28 ಸೆಪ್ಟೆಂಬರ್ 2023, 6:39 IST
Last Updated 28 ಸೆಪ್ಟೆಂಬರ್ 2023, 6:39 IST
ಅಕ್ಷರ ಗಾತ್ರ

ಮಡಿಕೇರಿ: ಹಳೆ ಖಾಸಗಿ ಬಸ್‌ನಿಲ್ದಾಣದ ಬಳಿ ನಿರ್ಮಿಸಿದ್ದ ಧ್ವಜಸ್ತಂಭವನ್ನು ನಗರಸಭೆ ತೆರವುಗೊಳಿಸಿದ್ದು ಸರಿಯಲ್ಲ ಎಂದು ಕೊಡಗು ಜಿಲ್ಲಾ ಬಸ್‌ ಕಾರ್ಮಿಕರ ಸಂಘದ ಅಧ್ಯಕ್ಷ ಭರತ್‌ಕುಮಾರ್ ಖಂಡಿಸಿದರು.

ನಗರದಲ್ಲಿರುವ ಗುಂಡಿಗಳನ್ನು ಮುಚ್ಚುವ ಬದಲು, ರಸ್ತೆಬದಿಯಲ್ಲಿ ಬೆಳೆದಿರುವ ಮುಳ್ಳುಗಂಟಿ ಗಿಡಗಳನ್ನು ತೆರವುಗೊಳಿಸುವುದರ ಬದಲು ನಗರಸಭೆ ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳಲ್ಲಿ ಬಳಕೆ ಮಾಡುತ್ತಿದ್ದ ಧ್ವಜಸ್ತಂಭವನ್ನು ತೆರವುಗೊಳಿಸಿದ್ದಾರೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಸ್‌ನಿಲ್ದಾಣವನ್ನು ನಾವೇ ಸ್ವಚ್ಛಗೊಳಿಸುತ್ತಿದ್ದೇವೆ. ನಗರಸಭೆ ಸಿಬ್ಬಂದಿ ಇದರ ಸ್ವಚ್ಛತಾ ಕಾರ್ಯ ಮಾಡುತ್ತಿಲ್ಲ. ನಾವು ರಾಷ್ಟ್ರೀಯ ಹಬ್ಬಗಳ ಆಚರಣೆಗಾಗಿ ನಿರ್ಮಿಸಿದ್ದ ಧ್ವಜಸ್ತಂಭವನ್ನು ಏಕಾಏಕಿ ತೆರವುಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ಸಂಘದ ಪದಾಧಿಕಾರಿಗಳಾದ ಕೆ.ಕೆ.ವಿಜಯ್, ಎ.ಎನ್.ಉಮೇಶ್, ಸುಲೇಮಾನ್, ಪುರುಷೋತ್ತಮ, ಎಚ್.ಎಸ್.ದೇವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT