ಸಿದ್ದಾಪುರ: ‘ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಇರುವ ಸಂದೇಹಗಳನ್ನು ಸರ್ಕಾರ ಮೊದಲು ಪರಿಹರಿಸಬೇಕು’ ಎಂದು ‘ಪ್ರಜಾವಾಣಿ’ ಸಹಾಯಕ ಸಂಪಾದಕ ಬಿ.ಎಂ.ಹನೀಫ್ ಇಲ್ಲಿ ಅಭಿಪ್ರಾಯಪಟ್ಟರು.

ಸಮೀಪದ ಕೊಂಡಂಗೇರಿಯ ಶಾದಿ ಮಹಲ್ನಲ್ಲಿ ‘ಸಿ.ಎ.ಎ, ಎನ್.ಆರ್.ಸಿ, ಎನ್.ಪಿ.ಆರ್ ಕಾರಣ ಮತ್ತು ಪರಿಣಾಮಗಳು’ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆಯು ಸಂವಿಧಾನ ವಿರುದ್ಧದ ಆಶಯವಾಗಿರುವ ಕಾರಣಕ್ಕೆ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ರಾಜಕೀಯ ಮುಖಂಡರ ಬದಲಿಗೆ, ಅಧಿಕಾರಿಗಳ ಮೂಲಕವೇ ಸಂದೇಹ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿತ್ತು. ಪೌರತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿದೆ. ಸರ್ಕಾರಕ್ಕೆ ಇಷ್ಟೊಂದು ಆತುರ ಮಾಡುವ ಅಗತ್ಯ ಇರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಇದು ರಾಜಕೀಯ ವಿಷಯವಲ್ಲ. ಭಾರತೀಯ ನಾಗರಿಕರ ವಿಚಾರ. ಕಾಯ್ದೆ ಸಂವಿಧಾನ ಬದ್ಧವಾಗಿದ್ದರೆ ಜಾರಿ ಮಾಡುವ ಬಗ್ಗೆಯೂ, ಸಂವಿಧಾನ ವಿರೋಧಿಯಾಗಿದ್ದರೆ ಕಾನೂನು ರೀತಿಯಲ್ಲಿ ಎದುರಿಸುವ ಬಗ್ಗೆಯೂ ಚರ್ಚೆಗಳು ನಡೆಯಲಿ’ ಎಂದು ಹೇಳಿದರು.

ಮುಸ್ಲಿಂ ಜಮಾತ್ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೊಸ್ ಕಿಲ್ಲೂರು, ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ವಕೀಲ ಕೆ. ಅಬ್ದುಲ್ಲಾ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಕೆ.ಎ.ಯಾಕೂಬ್, ಪಿ.ಯು.ಹನೀಫ್ ಸಖಾಫಿ, ಪಿ.ಎ.ಯೂಸುಫ್, ಜಿಲ್ಲಾ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.