ಗೋಣಿಕೊಪ್ಪಲು: ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶಿಸಿದ ಉದ್ದಿನಾಡಂಡ ತಂಡ ಸುಳ್ಳಿಮಾಡ ತಂಡದ ಎದುರು 10 ವಿಕೆಟ್ಗಳಿಂದ ಸುಲಭ ಜಯಗಳಿಸಿತು.

ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸುಳ್ಳಿಮಾಡ ತಂಡ ನಿಗದಿತ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಉದ್ದಿನಾಡಂಡ ತಂಡ ಕೇವಲ 4.5 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 78 ರನ್ ಗಳಿಸಿ ಗೆಲುವು ದಾಖಲಿಸಿತು.

ಉದ್ದಿನಾಡಂಡ ತಂಡದ ಸಾಗರ್ 15 ಬಾಲ್ಗಳಲ್ಲಿ 40 ರನ್ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದು ಕೊಟ್ಟರು.

2ನೇ ಪಂದ್ಯದಲ್ಲಿ ಆಟ್ರಂಗಡ ತಂಡ ಕೋಚಮಂಡ ತಂಡದ ವಿರುದ್ಧ 79 ರನ್ಗಳ ಭಾರಿ ಅಂತರದಿಂದ ಗೆಲುವು ಪಡೆಯಿತು. ಉತ್ತಮ ಬ್ಯಾಟಿಂಗ್ ಮಾಡಿದ ಆಟ್ರಂಗಡ ತಂಡದ ಶರತ್ 35 ಬಾಲ್ಗಳಲ್ಲಿ ಗಳಿಸಿದ 125 ರನ್ಗಳ ಶತಕದಾಟದಿಂದ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ನಿಗದಿತ 6 ಓವರ್ಗಳಲ್ಲಿ 141 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೋಚಮಂಡ ತಂಡ 3 ವಿಕೆಟ್ ಕಳೆದುಕೊಂಡು 62 ರನ್ ಮಾತ್ರ ಗಳಿಸಿತು. ಕೋಚಮಂಡ ತಂಡದ ರಕ್ಷಿತ್ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಕೈಪಟ್ಟೀರ ತಂಡ ತಂಡಿಯಂಗಡ ತಂಡದ ವಿರುದ್ಧ 33 ರನ್ಗಳಿಂದ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕೈಪಟ್ಟೀರ ತಂಡದ ಗಗನ್ 21 ಬಾಲ್ಗಳಲ್ಲಿ 52 ರನ್ ಗಳಿಸಿದರೆ ಇದೇ ತಂಡದ ಕರುಂಬಯ್ಯ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ತಡಿಯಂಗಡ ತಂಡದ ಕಿಶೋರ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಕುಟ್ಟಂಡ (ಅಮ್ಮತ್ತಿ) ಚಂಗಣಮಾಡ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತು. ಚಂಗಣಮಾಡ ತಂಡ ನೀಡಿದ 53 ರನ್ಗಳ ಗುರಿಯನ್ನು ಸುಲಭವಾಗಿ ಎದುರಿಸಿದ ಕುಟ್ಟಂಡ ತಂಡ 3.3 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 56 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಚಂಗಣಮಾಡ ತಂಡದ ಪೊನ್ನಣ್ಣ ಪಂದ್ಯಪುರುಷ ಪ್ರಶಸ್ತಿಗಳಿಸಿದರು.

ಕೋಟ್ರಮಾಡ ತಂಡ ಬಲ್ಯಮಾಡ ತಂಡವನ್ನು 7ವಿಕೆಟ್ಗಳಿಂದ ಮಣಿಸಿತು. ಬಲ್ಯಮಾಡ ತಂಡದ 44 ರನ್ ಗಳ ಗುರಿಯನ್ನು ಬೆನ್ನತ್ತಿದ ಕೋಟ್ರಂಗಡ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಬಲ್ಯಮಾಡ ತಂಡದ ತ್ರತಿನ್ 16 ರನ್ ಗಳಿಸಿದರೆ, ವಿಕಾಸ್ 14 ರನ್ ನೀಡಿ 3 ವಿಕೆಟ್ ಪಡೆದರು.

ಸಿದ್ದಂಡ ತಂಡ ಚೆನಿಯಪಂಡ ತಂಡದ ಎದುರು 9 ವಿಕೆಟ್ ಗಳಿಂದ ಸುಲಭ ಜಯಗಳಿಸಿತು. ಸಿದ್ದಂಡ ತಂಡದ ನಿತೇಶ್ 14 ಬಾಲ್ ಗಳಲ್ಲಿ 33 ರನ್ ಗಳಿಸಿ ತಂಡದ ಉತ್ತಮ ಮೊತ್ತ ಗಳಿಸಲು ನೆರವಾದರು. ಚೆನಿಯಪಂಡ ತಂಡದ ಲಿತನ್ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ ಪಡೆದರು.

Highlights - 35 ಬಾಲ್ಗಳಲ್ಲಿ 125 ರನ್ ಬಾರಿಸಿದ ಶರತ್ ಕಿಶೋರ್ ಪಂದ್ಯಪುರುಷ ಪ್ರಶಸ್ತಿ 21 ಬಾಲ್ಗಳಲ್ಲಿ 52 ರನ್ ಹೊಡೆದ ಗಗನ್

Graphic text / Statistics - ಗೋಣಿಕೊಪ್ಪಲು: ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶಿಸಿದ ಉದ್ದಿನಾಡಂಡ ತಂಡ ಸುಳ್ಳಿಮಾಡ ತಂಡದ ಎದುರು 10 ವಿಕೆಟ್ಗಳಿಂದ ಸುಲಭ ಜಯಗಳಿಸಿತು. ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸುಳ್ಳಿಮಾಡ ತಂಡ ನಿಗದಿತ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಉದ್ದಿನಾಡಂಡ ತಂಡ ಕೇವಲ 4.5 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 78 ರನ್ ಗಳಿಸಿ ಗೆಲುವು ದಾಖಲಿಸಿತು. ಉದ್ದಿನಾಡಂಡ ತಂಡದ ಸಾಗರ್ 15 ಬಾಲ್ಗಳಲ್ಲಿ 40 ರನ್ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದು ಕೊಟ್ಟರು. 2ನೇ ಪಂದ್ಯದಲ್ಲಿ ಆಟ್ರಂಗಡ ತಂಡ ಕೋಚಮಂಡ ತಂಡದ ವಿರುದ್ಧ 79 ರನ್ಗಳ ಭಾರಿ ಅಂತರದಿಂದ ಗೆಲುವು ಪಡೆಯಿತು. ಉತ್ತಮ ಬ್ಯಾಟಿಂಗ್ ಮಾಡಿದ ಆಟ್ರಂಗಡ ತಂಡದ ಶರತ್ 35 ಬಾಲ್ಗಳಲ್ಲಿ ಗಳಿಸಿದ 125 ರನ್ಗಳ ಶತಕದಾಟದಿಂದ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ನಿಗದಿತ 6 ಓವರ್ಗಳಲ್ಲಿ 141 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೋಚಮಂಡ ತಂಡ 3 ವಿಕೆಟ್ ಕಳೆದುಕೊಂಡು 62 ರನ್ ಮಾತ್ರ ಗಳಿಸಿತು. ಕೋಚಮಂಡ ತಂಡದ ರಕ್ಷಿತ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಕೈಪಟ್ಟೀರ ತಂಡ ತಂಡಿಯಂಗಡ ತಂಡದ ವಿರುದ್ಧ 33 ರನ್ ಗಳಿಂದ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕೈಪಟ್ಟೀರ ತಂಡದ ಗಗನ್ 21 ಬಾಲ್ ಗಳಲ್ಲಿ 52 ರನ್ ಗಳಿಸಿದರೆ ಇದೇ ತಂಡದ ಕರುಂಬಯ್ಯ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ತಡಿಯಂಗಡ ತಂಡದ ಕಿಶೋರ್ ಪಂದ್ಯಪುರಷ ಪ್ರಶಸ್ತಿಗೆ ಬಾಜನರಾದರು. ಕುಟ್ಟಂಡ (ಅಮ್ಮತ್ತಿ) ಚಂಗಣಮಾಡ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತು. ಚಂಗಣಮಾಡ ತಂಡ ನೀಡಿದ 53 ರನ್ ಗಳ ಗುರಿಯನ್ನು ಸುಲಭವಾಗಿ ಎದುರಿಸಿದ ಕುಟ್ಟಂಡ ತಂಡ 3.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 56 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಚಂಗಣಮಾಡ ತಂಡದ ಪೊನ್ನಣ್ಣ ಪಂದ್ಯಪುರುಷ ಪ್ರಶಸ್ತಿಗಳಿಸಿದರು. ಕೋಟ್ರಮಾಡ ತಂಡ ಬಲ್ಯಮಾಡ ತಂಡವನ್ನು 7ವಿಕೆಟ್ ಗಳಿಂದ ಮಣಿಸಿತು. ಬಲ್ಯಮಾಡ ತಂಡದ 44 ರನ್ ಗಳ ಗುರಿಯನ್ನು ಬೆನ್ನತ್ತಿದ ಕೋಟ್ರಂಗಡ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಬಲ್ಯಮಾಡ ತಂಡದ ತ್ರತಿನ್ 16 ರನ್ ಗಳಿಸಿದರೆ ವಿಕಾಸ್ 14 ರನ್ ನೀಡಿ 3 ವಿಕೆಟ್ ಪಡೆದರು. ಸಿದ್ದಂಡ ತಂಡ ಚೆನಿಯಪಂಡ ತಂಡದ ಎದುರು 9 ವಿಕೆಟ್ ಗಳಿಂದ ಸುಲಭ ಜಯಗಳಿಸಿತು. ಸಿದ್ದಂಡ ತಂಡದ ನಿತೇಶ್ 14 ಬಾಲ್ ಗಳಲ್ಲಿ 33 ರನ್ ಗಳಿಸಿ ತಂಡದ ಉತ್ತಮ ಮೊತ್ತ ಗಳಿಸಲು ನೆರವಾದರು. ಚೆನಿಯಪಂಡ ತಂಡದ ಲಿತನ್ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ ಪಡೆದರು. ಗುರುವಾರದ ಪಂದ್ಯಗಳು ಬೆಳಿಗ್ಗೆ 9ಕ್ಕೆ ನೆಲ್ಲೀರ - ಚಂಗುಲಂಡ 10ಕ್ಕೆ ನಾಯಕಂಡ - ಅರಮಣಮಾಡ 11ಕ್ಕೆ ಚೀರಂಡ - ಮೂಕಳೇರ 12ಕ್ಕೆ ಬಲ್ಲಾಡಿಚಂಡ - ಚೀಯಂಡೀರ ಮಧ್ಯಾಹ್ನ 1ಕ್ಕೆ ಕನ್ನಿಗಂಡ - ಪೊನ್ನಿಮಾಡ 2ಕ್ಕೆ ಪಾರುವಂಡ- ಮುಕ್ಕಾಟೀರ ( ಕುಂಜಿಲಗೇರಿ) 3ಕ್ಕೆ ಜಮ್ಮಡ(ಅರುವತ್ತೊಕ್ಕಲು) -ಮುಕ್ಕಾಟೀರ (ಮಾದಾಪುರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.