ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಭಾರಿ‌ ಮಳೆ: ರಸ್ತೆಗೆ ಉರುಳಿದ ಕಲ್ಲು

Last Updated 5 ಜುಲೈ 2022, 4:23 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾದ್ಯಂತ ಸೋಮವಾರ ರಾತ್ರಿ ಇಡೀ ಭಾರಿ ಗಾಳಿ ಹಾಗೂ ಮಳೆ ಮುಂದುವರಿದಿದೆ.‌

ಸತತ ,4 ನೇ ದಿನವೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಲಕಾವೇರಿ ಭಾಗಮಂಡಲ ಪ್ರದೇಶದಲ್ಲಿ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿಗೆ ಮುರಿದಿವೆ.

ಸೋಮವಾರ ರಾತ್ರಿ ಇಡೀ ಮಡಿಕೇರಿ ನಗರ‌ಕ್ಕೆ ವಿದ್ಯುತ್ ಸರಬರಾಜು ನಿಂತಿತ್ತು. ಬೆಳಿಗ್ಗೆ ವಿದ್ಯುತ್ ಪೂರೈಕೆ ಆಗಿದ್ದರೂ ಕುಶಾಲನಗರ ಸಮೀಪ ವಿದ್ಯುತ್ ಲೈನ್ ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ. ಮಂಗಳವಾರ ಸಂಜೆಯವರೆಗೂ ವಿದ್ಯುತ್ ಪೂರೈಕೆ ಮಡಿಕೇರಿ ನಗರಕ್ಕೆ ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ತಿಳಿಸಿದೆ.

ಎಲ್ಲೆಡೆ ದಟ್ಟ ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿಯುತ್ತಿದೆ.ಹಾರಂಗಿ ಜಲಾಶಯದಿಂದ 12,866 ಕ್ಯುಸೆಕ್ ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT