ಬುಧವಾರ, ಮಾರ್ಚ್ 3, 2021
29 °C

ಮೊರಾರ್ಜಿ ದೇಸಾಯಿ ವಸತಿ ಶಾಲೆಯ 24 ವಿದ್ಯಾರ್ಥಿಗಳಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂಟಿಕೊಪ್ಪ (ಕೊಡಗು): ಸಮೀಪದ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದ್ವಿತೀಯ ಪಿಯುನ 24 ವಿದ್ಯಾರ್ಥಿಗಳಿಗೆ ಕೋವಿಡ್‌–19 ದೃಢಪಟ್ಟಿದೆ.

ಮಂಗಳವಾರ ಒಬ್ಬ ವಿದ್ಯಾರ್ಥಿಯಲ್ಲಿ ನೆಗಡಿ ಹಾಗೂ ಶೀತ ಕಾಣಿಸಿದ್ದು, ಆತನ ಪರೀಕ್ಷೆ ಒಳಪಡಿಸಿದ್ದರಿಂದ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅಂದೆ ಸಂಜೆ 18 ವಿದ್ಯಾರ್ಥಿಗಳ ಗಂಟಲು, ಮೂಗು ದ್ರವದ ಪರೀಕ್ಷೆ ನಡೆಸಿದ್ದು, ಅವರಲ್ಲಿ 13 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ಉಳಿದ ವಿದ್ಯಾರ್ಥಿಗಳ ತಪಾಸಣೆಯನ್ನು ಬುಧವಾರ ನಡೆಸಿದ್ದು, ಅವರಲ್ಲಿ 11 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

‘ಒಟ್ಟು 24 ವಿದ್ಯಾರ್ಥಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆರೋಗ್ಯದಿಂದ ಇದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

‘ತರಗತಿಗಳು ಆರಂಭವಾಗಿದ್ದ ವೇಳೆ ಕೊಡಗು, ಹಾಸನ, ಮೈಸೂರು ಸೇರಿದಂತೆ ಇತರೆ ಜಿಲ್ಲೆಯಿಂದ ಬಂದ ವಿದ್ಯಾರ್ಥಿಗಳ ನೆಗೆಟಿವ್ ವರದಿ ಪಡೆದೇ ಕಾಲೇಜಿಗೆ ಪ್ರವೇಶ ನೀಡಲಾಗಿತ್ತು. ಎಲ್ಲ ಮಕ್ಕಳು ಆರೋಗ್ಯದಿಂದಲೇ ಓಡಾಡುತ್ತಿದ್ದರು. ನಿತ್ಯವೂ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿತ್ತು’ ಎಂದು ಕಾಲೇಜಿನ ಪ್ರಾಂಶುಪಾಲ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.