ಭಾನುವಾರ, ಸೆಪ್ಟೆಂಬರ್ 26, 2021
23 °C

ಗೋಣಿಕೊಪ್ಪಲು: ಕೋವಿಡ್ ಲಸಿಕೆ ಪಡೆದ ಹಾಡಿ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ನಾಗರಹೊಳೆ ಹಾಡಿಯ ಗಿರಿಜನರು ಬುಧವಾರ ಲಸಿಕೆ ಹಾಕಿಸಿಕೊಂಡರು. ಆರೋಗ್ಯ ಕಾರ್ಯಕರ್ತೆಯರ ಸತತ ಮನವೊಲಿಕೆಯಿಂದ ಹಾಡಿಯ 100 ಜನರಿಗೆ ಬುಧವಾರ ಲಸಿಕೆಯ ಮೊದಲ ಡೋಸ್‌ ನೀಡಲಾಯಿತು.

ನಾಲ್ಕೇರಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ನಡೆದ ಲಸಿಕೆ ಅಭಿಯಾನಕ್ಕೆ ಹಾಡಿ ಜನರ ಮನವೊಲಿಸಿ ಕರೆ ತರಲಾಯಿತು.

‘ಎರಡು ತಿಂಗಳಿನಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ, ಗಿರಿಜನರು ಭಯಪಟ್ಟು ಹಿಂಜರಿಯುತ್ತಿದ್ದರು. ಆರೋಗ್ಯ ಸೇವಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು ವಿಶ್ವಾಸ ತುಂಬಿದ ಫಲವಾಗಿ ಇದೀಗ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿರಿಯಪಂಡ ಸಚಿನ್ ಪೆಮ್ಮಯ್ಯ ಹೇಳಿದರು.

ಪಿಡಿಒ ಕಾಕೆರ ಕಾಳಪ್ಪ, ನಾಗರಹೊಳೆ ಅರಣ್ಯ ಸಂರಕ್ಷಣಾ ಸಮಿತಿ ಸದಸ್ಯ ಮನುಕುಮಾರ್, ಆರೋಗ್ಯ ಸೇವಾ ಕಾರ್ಯಕರ್ತೆ ರತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು