ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಕಾವೇರಿ ನದಿದಂಡೆಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ : ಪಟ್ಟಣದ ವಿವೇಕಾನಂದ ಬಡಾವಣೆಯ ಕಾವೇರಿ ನದಿ ದಡದಲ್ಲಿ ನಾಲ್ಕು ಮೊಸಳೆ ಮರಿಗಳು ಬುಧವಾರ ಪ್ರತ್ಯಕ್ಷವಾಗಿವೆ.

ನದಿ ಮೈದುಂಬಿ ಹರಿಯುತ್ತಿದ್ದು, ಮೊಸಳೆಗಳು ದಂಡೆ ಮೇಲೆ ಹತ್ತಿ ಬರುತ್ತಿವೆ. ನದಿಯಲ್ಲಿ ಬೃಹತ್ ಗಾತ್ರದ ಹೆಣ್ಣು ಮೊಸಳೆಯಿದ್ದು, ಇತ್ತೀಚಿನ ದಿನಗಳಲ್ಲಿ ಈ ಮೊಸಳೆ ನದಿ ದಡದಲ್ಲಿ‌ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿದೆ. ಈ ಮರಿಗಳು ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ದಡದತ್ತ ಲಗ್ಗೆ ಹಾಕುತ್ತಿವೆ.

ನಾಲ್ಕು ಮರಿಗಳು ದಡದಲ್ಲಿ ಓಡಾಡುವುದನ್ನು ನೋಡಿದ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದಾರೆ.

ನದಿಯಲ್ಲಿರುವ ಬೃಹತ್ ಮೊಸಳೆಯನ್ನು ಹಿಡಿದು ಬೇರೆ ಕಡೆಗೆ ಬೀಡುವಂತೆ ಅರಣ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದೀಗ ಮೊಸಳೆ ಮರಿಗಳು‌ ಬಡಾವಣೆಯ ಮನೆಗಳತ್ತಬರುತ್ತಿರುವುದು ಆತಂಕ ಉಂಟು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು