ಕುಶಾಲನಗರ : ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಕೋಳಿ ಸಾಕಣೆ ಕೇಂದ್ರದಲ್ಲಿ ಭಾನುವಾರ ರೈತರಿಗೆ ರಿಯಾಯಿತಿ ದರದಲ್ಲಿ ಗಿರಿರಾಜ ಕೋಳಿಗಳನ್ನು ವಿತರಣೆ ಮಾಡಲಾಯಿತು.

ಈ ಬಾರಿ ಸುಮಾರು ಐದು ನೂರು ಗಿರಿರಾಜ ಕೋಳಿಗಳನ್ನು ವಿತರಿಸಲು ಮುಖ್ಯ ಪಶುವೈದ್ಯಾಧಿಕಾರಿ ಡಾ.ಕೆ.ನಾಗರಾಜು ವ್ಯವಸ್ಥೆ ಮಾಡಿದ್ದರು. ಒಂದು ಕೋಳಿಗೆ ₹500 ರಂತೆ ವಿತರಿಸಲು ಕ್ರಮ ಕೈಗೊಂಡಿದ್ದರು. ಆದರೆ ನಿರೀಕ್ಷೆಗಿಂತಲು ಹೆಚ್ಚಿನ ರೈತರು ಬಂದಿದ್ದರು.

ಬೇಡಿಕೆ ಹೆಚ್ಚಿದ ಕಾರಣ ಕೋಳಿ ವಿತರಣೆಗೆ ಸ್ವಲ್ಪ ಅಡ್ಡಿಯಾಯಿತು. ಕೂಡಿಗೆ ಸೇರಿದಂತೆ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಕೋಳಿ ಖರೀದಿಸಲು ಪೈಪೋಟಿ ನಡೆಸಿ, ನೂಕುನುಗ್ಗಲು ಉಂಟಾಯಿತು. ಲಭ್ಯ ಕೋಳಿಗಳನ್ನು ವಿತರಣೆ ಮಾಡಿದ ನಾಗರಾಜು, ಉಳಿದ ರೈತರಿಗೆ ಚೀಟಿ ನೀಡಿ ಬುಧವಾರ ಹೆಚ್ಚುವರಿ ಕೋಳಿಗಳನ್ನು ನೀಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.