ಮಡಿಕೇರಿ: ಶ್ರೀ ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯು ತನ್ನ 60ನೇ ವರ್ಷದ ಮಂಟಪೋತ್ಸವದ ಸಂಭ್ರಮದಲ್ಲಿದೆ. ಕಳೆದ ಬಾರಿ ಗೋಮಹಾತ್ಮೆಯನ್ನು ಸಾರುವ ಮಂಟಪವನ್ನು ರೂಪಿಸಿ ಜನಮನ್ನಣೆ ಗಳಿಸಿದ್ದ ಸಮಿತಿಯು ಈ ಬಾರಿ ‘ಶಿವನಿಂದ ತ್ರಿಪುರಾಸುರರ ವಧಾ ಪ್ರಸಂಗ’ದ ಕಥಾವಸ್ತುವನ್ನು ಆಯ್ದುಕೊಂಡಿದೆ.
ತಮಿಳುನಾಡಿನ ಸನ್ ಬರ್ನ್ ಈವೆಂಟ್‌ಗೆ ಸ್ಟುಡಿಯೊ ಸೆಟ್ಟಿಂಗ್ ಮಾಡುತ್ತಿದ್ದು, ದಿಂಡಿಗಲ್‌ನ ಡೇವಿಡ್ ಆರ್ಚ್ ಬೋರ್ಡ್ ವಿನ್ಯಾಸ ಮಾಡುತ್ತಿದ್ದಾರೆ. ಬಿಪಿನ್ ಮತ್ತು ತಂಡವು 2 ಟ್ರಾಕ್ಟರ್‌ನಲ್ಲಿ ಪ್ರತಿಕೃತಿಗಳನ್ನು ಜೋಡಿಸುವ ಕೆಲಸ ಮಾಡುತ್ತಿದೆ.
ದೇವರು ಮತ್ತು ರಾಕ್ಷಸರೂ ಸೇರಿದಂತೆ ಒಟ್ಟು 30 ಪ್ರತಿಕೃತಿಗಳು ಇದರಲ್ಲಿ ಇರಲಿದ್ದು, ಇದರ ಚಲನವಲನಗಳನ್ನು ಶೋಮ್ಯಾನ್ ಕ್ರಿಯೇಷನ್ಸ್ ಮಾಡುತ್ತಿದೆ. ಇದಕ್ಕಾಗಿ ಒಟ್ಟು ₹ 27 ಲಕ್ಷ ವೆಚ್ಚ ಮಾಡಲಾಗುತ್ತಿದೆ.
ಒಟ್ಟು ಸುಮಾರು 250 ಸದಸ್ಯರಿರುವ ಈ ಸಮಿತಿಯಲ್ಲಿ ಸಲಹೆಗಾರರಾಗಿ ಕವನ್ ಕಾವೇರಪ್ಪ, ಉಮೇಶ್ ಸುಬ್ರಹ್ಮಣ್ಯ ನಿಖಿಲ್ ನಂಜಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಡಳಿಯ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ‘ಈ ಬಾರಿ ಕಳೆದ ಬಾರಿಗಿಂತಲೂ ಅಮೋಘ ಪ್ರದರ್ಶನ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಉದ್ಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ₹ 27 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಹಲವು ವೈವಿಧ್ಯಮಯ ಪ್ರದರ್ಶನಗಳು ಇರಲಿವೆ’ ಎಂದು ಹೇಳಿದರು.
ಶಿವನಿಂದ ತ್ರಿಪುರಾಸುರ ವಧೆ ಪ್ರಸಂಗ ಸಾಮಾನ್ಯವಾಗಿ ಯುದ್ಧದ ಸನ್ನಿವೇಶಗಳಿಂದ ಕೂಡಿದೆ. ರಾಕ್ಷಸ ಸಂಹಾರದ ಹಂತವು ಅತ್ಯಂತ ರೋಚಕವಾಗಿರುವಂತೆ ಮಾಡಲು ಕಸರತ್ತು ನಡೆಸಲಾಗುತ್ತಿದೆ. ಕಳೆದ ಬಾರಿಗಿಂತಲೂ ಅತ್ಯುತ್ತಮವಾದ ಪ್ರದರ್ಶನ ನೀಡಲು ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.