ಗುರುವಾರ , ಮೇ 13, 2021
22 °C
ನಾಪೋಕ್ಲು ವಿಭಾಗದ ಗ್ರಾಮಸ್ಥರಿಂದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಒಂದು ತಿಂಗಳಿಂದ ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದನ್ನು ಖಂಡಿಸಿ ನಾಪೋಕ್ಲು ವಿಭಾಗದ ನಾಗರಿಕರು ಸೆಸ್ಕ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥ ಕೆಟೋಳಿರ ಹರೀಶ್ ಪೂವಯ್ಯ ಮಾತನಾಡಿ, ‘ಕಳೆದ ತಿಂಗಳಿಂದ ಸರಿಯಾಗಿ ವಿದ್ಯುತ್‌ ನೀಡುತ್ತಿಲ್ಲ, ಅಧಿಕಾರಿಗಳ ಬೇಜವಾ ಬ್ದಾರಿಯೇ ಕಾರಣ’ ಎಂದು ದೂರಿದರು.

‘ಎರಡು ವರ್ಷಗಳ ಹಿಂದೆ ಇಲ್ಲಿನ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಎಕ್ಸ್‌ಪ್ರೆಸ್ ವೇ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಇದರಿಂದ ಯಾರಿಗೂ ಪ್ರಯೋಜನವಾಗಿಲ್ಲ. ಮಕ್ಕಳ ಪರೀಕ್ಷೆ ಸಮಯದಲ್ಲಿ ವಿದ್ಯುತ್ ಕಡಿತ ಸರಿಯಲ್ಲ’ ಎಂದರು.

‘ನಾಪೋಕ್ಲುವಿಗೆ ಸ್ವಲ್ಪ ಮಳೆ ಬಂದರೂ ವಿದ್ಯುತ್ ಕಡಿತವಾಗುತ್ತದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ನಾಲ್ಕುನಾಡಿನ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸ ಲಾಗುವುದು’ ಎಂದು ಎಚ್ಚರಿಸಿದರು.

ಜೂನಿಯರ್ ಎಂಜಿನಿಯರ್ ದಿನೇಶ್ ಮಾತನಾಡಿ, ಅಧಿಕಾರಿ ಭನಂಜಯ ಅವರಿಗೆ ವಿಷಯ ತಿಳಿಸಿದ್ದು, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಾಪೋಕ್ಲುವಿಗೆ ಬಂದು ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ದವಸ ಬಂಡಾರದ ಅಧ್ಯಕ್ಷ ಕಂಗಾಂಡ ಜಾಲಿ ಪೂವಪ್ಪ, ಕೊಡವ ಸಮಾಜದ ನಿರ್ದೇಶಕ ಕುಂಡ್ಯೋಳಂಡ ವಿಶು ಪೂವಯ್ಯ, ಶಿವಚಾಳಿಂಡ ಪ್ರಸಾದ್ ತಿಮ್ಮಯ್ಯ, ಬಿಜಿಪಿ ತಾಲ್ಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಕುಂಡ್ಯೋಳಂಡ ಮುತ್ತಣ್ಣ, ಕೆಟೋಳಿರ ಅಪ್ಪಚ್ಚ, ರವಿ ಭಟ್, ಅಚ್ಚಾಂಡೀರ ಸಾಬು ದೇವಯ್ಯ, ಕುಂಡ್ಯೋಳಂಡ ತಮ್ಮಣಿ, ಕುಲ್ಲೇಟಿರ ರಾಜೇಶ್, ಕರ್ತಮಾಡ ವಿಜು ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು