ಸಿದ್ದಾಪುರ: ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟದಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆ ಅರಣ್ಯಕ್ಕೆ ಬಿಟ್ಟಿದ್ದ ದಕ್ಷ ಎಂಬ ಕಾಡಾನೆ ಕೇವಲ ಒಂದೇ ವಾರದಲ್ಲಿ ಮರಳಿ ಬಾಣಂಗಾಲಕ್ಕೆ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದಲ್ಲಿ ಬೀಡಿಬಿಟ್ಟು ಉಪಟಳ ನೀಡುತ್ತಿದ್ದ ಒಂಟಿಸಲಗನನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ಈ ವೇಳೆ ಆನೆ ಚಲನವಲನ ತಿಳಿಯಲು ರೇಡಿಯೋ ಕಾಲರ್ ಅಳವಡಿಸಿದ್ದರು. ಬಳಿಕ ನಾಗರಹೊಳೆ ಅರಣ್ಯದ ಅಂತರಸಂತೆಗೆ ಬಿಡಿಲಾಗಿತ್ತು. ಆದರೆ, ಇದೀಗ ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸಲಗ 26 ವರ್ಷ ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 10 ಅಡಿ ಎತ್ತರವಿದ್ದು, ಆಕ್ರಮಣಕಾರಿ ಆನೆಯಾಗಿದೆ. ಗ್ರಾಮದ ಆಯಿಷಾ ಎಂಬವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ದಾಳಿಗೆ ಮುಂದಾಗಿತ್ತು. ಸಿಟ್ಟಿನಿಂದ ಕಾಫಿ ಸೇರಿದಂತೆ ಕೃಷಿ ಗಿಡಗಳನ್ನು ನಾಶ ಮಾಡುತ್ತಿತ್ತು. ಹಾಗಾಗಿ ಸ್ಥಳೀಯರು ಈ ಸಲಗಕ್ಕೆ ಹೆದರುತ್ತಿದ್ದರು.

ಲಕ್ಷಾಂತಜರ ವೆಚ್ಚ: ಮೇ 14 ಹಾಗೂ 15ರಂದು ಆನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಚಾಚರಣೆ ನಡೆಸಿದ್ದರು. ಈ ಸಂದರ್ಭ 6 ಸಾಕಾನೆಗಳು ಸೇರಿ ನೂರಕ್ಕೂ ಅಧಿಕ ಸಿಬ್ಬಂದಿ ಎರಡು ದಿನ ಶ್ರಮವಹಿಸಿದ್ದರು. ಇದಲ್ಲದೇ ಸಲಗ ಸೆರೆ ಹಿಡಿದ ಸಂದರ್ಭ ಚಲನವಲನ ಅರಿಯಲು ಲಕ್ಷಾಂತರ ಹಣ ವ್ಯಯಿಸಿ ರೇಡಿಯೋ ಕಾಲರ್ ಅಳವಡಿಸಿದ್ದರು.

ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟದಲ್ಲಿ ಸೆರೆಹಿಡಿದಿದ್ದ ಕಾಡಾನೆ ಸುತ್ತಾಡುತ್ತಿದೆ. ಆನೆಗೆ ರೇಡಿಯೋ ಕಾಲರ್ ಇದ್ದು, ಲೈನ್ ಮನೆಗಳ ಸಮೀಪದಲ್ಲೇ ಸುತ್ತಾಡುತ್ತಿದೆ. ಇದರಿಂದ ಭಯ ಮನೆ ಮಾಡಿದೆ ಎಂದು ಗ್ರಾಮಸ್ಥ ಸುನಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.