ಮಂಗಳವಾರ, ನವೆಂಬರ್ 24, 2020
21 °C

ಗೋಣಿಕೊಪ್ಪಲು: ಕಾಡಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಶ್ರೀಮಂಗಲ ಸಮೀಪದ ಮಂಚಳ್ಳಿಯಲ್ಲಿ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ಮೃತಪಟ್ಟಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

 ಬೆಳ್ಳಿಯಪ್ಪ ಅವರ ತೋಟಕ್ಕೆ ಬಂದಿದ್ದ ಅಂದಾಜು 20 ವರ್ಷದ ಹೆಣ್ಣಾನೆಯು ತೋಟದ ದಿಣ್ಣೆ ಹತ್ತುವಾಗ, 11 ಕೆ.ವಿ ಮಾರ್ಗದ ವಿದ್ಯುತ್ ತಂತಿ ತಗುಲಿ ಎರಡು ದಿನಗಳ ಹಿಂದೆಯೇ ಅಸುನೀಗಿದೆ. ಪಶು ವೈದ್ಯಾಧಿಕಾರಿ ಗಿರೀಶ್, ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಆನೆಯನ್ನು ಸುಡಲಾಯಿತು.

ಸ್ಥಳಕ್ಕೆ ಶ್ರೀಮಂಗಲ ಎಸಿಎಫ್ ಉತ್ತಪ್ಪ, ವಲಯ ಅರಣ್ಯಾಧಿಕಾರಿ ವೀರೇಂದ್ರ, ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.