ಮಡಿಕೇರಿ: ಗೋಣಿಕೊಪ್ಪಲು ಸಮೀಪದ ಕಳತ್ಮಾಡು ತೋಟವೊಂದರಲ್ಲಿ ಕಾಡಾನೆಯೊಂದರ ಮೃತದೇಹ ಭಾನುವಾರ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.
‘ಸುಮಾರು 30ರಿಂದ 35 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಮೇಲ್ನೋಟಕ್ಕೆ ಸಾವಿಗೆ ಯಾವುದೇ ಕಾರಣಗಳೂ ಪತ್ತೆಯಾಗಿಲ್ಲ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೇ ನಿಖರ ಕಾರಣ ಹೇಳಲು ಸಾಧ್ಯ’ ಎಂದು ಡಿಸಿಎಫ್ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.