ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಕಾಡು: ಕಾಡಾನೆ ಹಾವಳಿ ತೆಂಗಿನ ತೋಟಕ್ಕೆ ಹಾನಿ

Published 29 ಫೆಬ್ರುವರಿ 2024, 7:47 IST
Last Updated 29 ಫೆಬ್ರುವರಿ 2024, 7:47 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಾಡು ಸುತ್ತಮುತ್ತ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ರೈತರ ತೋಟಕ್ಕೆ ನುಗ್ಗಿ ಅಪಾರ ಹಾನಿ ಮಾಡಿವೆ.

ಆನೆಕಾಡು ಬಳಿ ರೈತ ಗೀತಾ, ದೇವರಾಜ್ ಅವರ ತೋಟಕ್ಕೆ ದಾಳಿಯಿಟ್ಟ ಕಾಡಾನೆಗಳ ಹಿಂಡು ಫಸಲು ನೀಡುತ್ತಿದ್ದ ತೆಂಗಿನಮರ ಹಾಗೂ ಅಡಿಕೆ ಗಿಡಗಳನ್ನು ಮುರಿದು ಹಾನಿ ಮಾಡಿವೆ.

ತೋಟ ಹಾಗೂ ಕೃಷಿ ಭೂಮಿಯನ್ನು ಹಾಳು ಮಾಡಿರುವ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ದಾಳಿಗೆ
ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳು ನೆಲಕಚ್ಚಿವೆ.

ಕಾಡಾನೆ ನಿಯಂತ್ರಣಕ್ಕೆ ಅರಣ್ಯಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿರುವ ರೈತರು, ಕಾಡಾನೆ ಹಾವಳಿಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕುಶಾಲನಗರ ಸಮೀಪ ಆನೆಕಾಡು ಸುತ್ತಮುತ್ತ ಕಾಡಾನೆ ಹಾವಳಿ ತೀವ್ರಗೊಂಡಿದ್ದು ರೈತರ ತೋಟಕ್ಕೆ ಲಗ್ಗೆ ಹಾಕಿದ ಕಾಡಾನೆಗಳು ತೆಂಗು ಅಡಿಕೆ ಗಿಡಗಳನ್ನು ತಿಂದು ಮುರಿದು ಹಾನಿ ಮಾಡಿವೆ
ಕುಶಾಲನಗರ ಸಮೀಪ ಆನೆಕಾಡು ಸುತ್ತಮುತ್ತ ಕಾಡಾನೆ ಹಾವಳಿ ತೀವ್ರಗೊಂಡಿದ್ದು ರೈತರ ತೋಟಕ್ಕೆ ಲಗ್ಗೆ ಹಾಕಿದ ಕಾಡಾನೆಗಳು ತೆಂಗು ಅಡಿಕೆ ಗಿಡಗಳನ್ನು ತಿಂದು ಮುರಿದು ಹಾನಿ ಮಾಡಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT