ಮಡಿಕೇರಿ: ಕೊಡಗಿನ ಹಿನ್ನೆಲೆಯ ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರವು ಆಗಸ್ಟ್ 1ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದರು.

ಈ ಚಿತ್ರವು ರಾಜ್ಯದ ಸುಮಾರು 75 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಇತರೆ ಭಾಷೆಗಳಿಗೂ ಡಬ್ಬಿಂಗ್ಗೆ ಬೇಡಿಕೆ ಬಂದಿದೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೈ ಫೈವ್ ಸ್ಟುಡಿಯೋಸ್ ಮತ್ತು ಎಸಿಇ 22 ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾದ ಸಿನಿಮಾದ ಟ್ರೈಲರ್ ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಕಥಾವಸ್ತುವನ್ನು ತೆರೆಯ ಮೇಲೆ ತರಲು ನಿರ್ದೇಶಕ ರಾ ಸೂರ್ಯ ಬಹಳಷ್ಟು ಶ್ರಮವಹಿಸಿದ್ದಾರೆ ಎಂದರು.

ನಟ ಶೌರ್ಯಪ್ರತಾಪ್ ಮಾತನಾಡಿ, ಈ ಚಿತ್ರವನ್ನು ಕೊಡಗಿನಲ್ಲಿಯೇ ಚಿತ್ರೀಕರಣ ಮಾಡಿರುವುದು ವಿಶೇಷ. ಚಿತ್ರದ ನಿರ್ದೇಶಕ ರಾ ಸೂರ್ಯ ಅವರು ಇಲ್ಲಿನ ನೆಲಜಿ ಗ್ರಾಮದವರು. ಚಿತ್ರದಲ್ಲಿ ಕೊಡಗಿನ 13 ಮಂದಿ ನಟಿಸಿದ್ದಾರೆ ಎಂದು ಹೇಳಿದರು.

ಸತ್ಯ ಶ್ರೀನಿವಾಸನ್ ಮತ್ತು ಪವೀಂದ್ರ ಮುತ್ತಪ್ಪ ಕೂಪದಿರ, ನಿರ್ಮಾಣದ ಜೊತೆಗೆ, ಇಡೀ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರಸನ್ನ ಕೇಶವ ಸಂಗೀತ ನೀಡಿದ್ದಾರೆ. ರುಹಾನ್ ಆರ್ಯ, ಕಾಕ್ರೋಚ್ ಸುಧಿ, ಪ್ರಿಯಾಂಕಾ ಮಳಲಿ, ರಾಮ್, ಧನು ದೇವಯ್ಯ, ಸಮ್ರಾಟ್, ಪ್ರಶಾಂತ್, ತಾರಕ್, ಅವಿರೇಶ್, ಜೋಗಿ ರವಿ, ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿನಿಮಾದ ಐದು ಹಾಡುಗಳು ಹೈ5 ಮ್ಯೂಸಿಕ್ ಯೂಟ್ಯೂಬ್ನಲ್ಲಿ ಇವೆ ಎಂದು ಹೇಳಿದರು.

ನಿರ್ದೇಶಕ ರಾ ಸೂರ್ಯ, ಸಹ ನಿರ್ಮಾಪಕ ಮುತ್ತಪ್ಪ ಕೂಪದಿರ, ನಟರಾದ ರುಹಾನ್ ಆರ್ಯ, ಧನುದೇವಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.