ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದರೂ ಕೆಲವೊಂದು ವಿಭಾಗಗಳಲ್ಲಿ ತಜ್ಞ ವೈದ್ಯರ ನೆರವನ್ನು ದೂರ ಸಂವಹನದ ಮೂಲಕ ನೀಡಲಾಗುತ್ತಿದೆ. ಅದರಲ್ಲಿ ‘ಟೆಲಿ ನ್ಯೂರೊಲಜಿ’ ಸೇವೆಯೂ ಒಂದು.

ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಲ್ಲಿ ಅಪಸ್ಮಾರ ಸೇರಿದಂತೆ ಮಿದುಳಿಗೆ ಸಂಬಂಧಿಸಿದ ರೋಗಿಗಳಿಗೆ ‘ಟೆಲಿ ನ್ಯೂರೊಲಜಿ’ ಸೇವೆ ಆರಂಭವಾಗಿದೆ. ಇದರಲ್ಲಿ ನಿಮ್ಹಾನ್ಸ್ ತಜ್ಞ ವೈದ್ಯರೇ ರೋಗಿಗೆ ಟೆಲಿ ನ್ಯೂರೊಲಜಿ ಮೂಲಕ ಚಿಕಿತ್ಸೆ ನೀಡುತ್ತಾರೆ.

ಅಪಸ್ಮಾರ ಅಥವಾ ಮೂರ್ಛೆ ಅಥವಾ ಫಿಡ್ಸ್ ಎಂದು ಕರೆಯಲಾಗುವ ಈ ಕಾಯಿಲೆಯಿಂದ ಬಳಲುವವರು ಬೇರೆ ಜಿಲ್ಲೆಯ ಜಿಲ್ಲಾಸ್ಪತ್ರೆ ಅಥವಾ ನಿಮ್ಹಾನ್ಸ್ಗೆ ಹೋಗುವುದನ್ನು ಈ ಸೇವೆ ತಪ್ಪಿಸಿದೆ. ಇಲ್ಲಿಯೇ ಉಚಿತ ಚಿಕಿತ್ಸೆ ಲಭ್ಯವಿದೆ. ಮಾತ್ರವಲ್ಲ, ಔಷಧವೂ ಸಂಪೂರ್ಣ ಉಚಿತ ಇದೆ.

ವೈದ್ಯರು ಹೇಳಿದಂತೆ ನಿಯಮಿತವಾಗಿ, ನಿಗದಿತ ಅವಧಿಗೆ ಔಷಧ ತೆಗೆದುಕೊಂಡರೆ ಈ ಕಾಯಿಲೆಯನ್ನು ನಿಶ್ಚಿತವಾಗಿಯೂ ನಿಯಂತ್ರಣದಲ್ಲಿಡಬಹುದು ಎಂದು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಕಾರ್ಯಕ್ರಮ ಅಧಿಕಾರಿ ಡಾ.ಜಿ.ಕೆ.ಸನತ್ಕುಮಾರ್ ಹೇಳುತ್ತಾರೆ.

ಹಳ್ಳಿಗಳಲ್ಲಿ ಹಾಗೂ ಹಾಡಿಗಳಲ್ಲಿ ಈ ಕಾಯಿಲೆಯಿಂದ ಬಳಲುವವರು ಸಾಕಷ್ಟು ಮಂದಿ ಇದ್ದಾರೆ. ಇದು ನಾವು ಮಾಡಿದ ಪೂರ್ವಜನ್ಮದ ಪಾಪದ ಫಲ ಎಂದೋ, ಯಾವುದೋ ಶಾಪವೆಂದೋ ತಿಳಿದುಕೊಂಡು ಮೌನವಾಗಿ ನೋವು ಅನುಭವಿಸುತ್ತಿದ್ದಾರೆ. ಮಾತ್ರವಲ್ಲ, ಅಲ್ಲಲ್ಲಿ ಕೆಲವೊಂದು ಸ್ಥಳೀಯ ಹಸಿರು ಔಷಧ ಸೇವಿಸುತ್ತಿದ್ದಾರೆ. ಕೆಲವೊಂದು ಸ್ಪಂದಿಸದೇ ಕಾಯಿಲೆ ಉಲ್ಭಣಾವಸ್ಥೆ ತಲುಪಿ ಮೃತಪಡುತ್ತಿದ್ದಾರೆ.

ಇದನ್ನು ಮನಗಂಡಿರುವ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಅಧಿಕಾರಿಗಳು ಇಂತಹ ರೋಗಿಗಳನ್ನು ಗುರುತಿಸಲೆಂದೇ ಆಶಾ ಕಾರ್ಯಕರ್ತೆಯರಿಗೆ ಕಳೆದ ತಿಂಗಳು ತರಬೇತಿಯನ್ನೂ ನೀಡಿದೆ. ಅವರು ತಮ್ಮ ವ್ಯಾಪ್ತಿಯಲ್ಲಿ ಅಪಸ್ಮಾರದ ಲಕ್ಷಣಗಳಿಂದ ಬಳಲುವವರನ್ನು ಗುರುತಿಸಿ, ಅವರ ಮನವೊಲಿಸಿ ಜಿಲ್ಲಾಸ್ಪತ್ರೆಯಲ್ಲಿರುವ ‘ಮಿದುಳು ಕ್ಲಿನಿಕ್’ಗೆ ಕರೆ ತರಬೇಕಿದೆ.

ಅನುವಂಶೀಯ ಕಾರಣಗಳು, ಅನಾರೋಗ್ಯಕರ ಜೀವನ ಶೈಲಿ, ಧೂಮಪಾನ, ಮದ್ಯಪಾನ, ಮಾದಕವಸ್ತು ಸೇವನೆ, ಮಿದುಳಿನಲ್ಲಿ ಉಂಟಾಗುವ ಅಸಮರ್ಪಕ ವಿದ್ಯುತ್ ಸಂಚಲನ, ಮಿದುಳಿಗೆ ಆಮ್ಲಜನಕದ ಪೂರೈಕೆಯಲ್ಲಿ ತೊಂದರೆ, ಏಟು ಬಿದ್ದಾಗ, ಗೆಡ್ಡೆ ಉಂಟಾದಾಗ ಅಪಸ್ಮಾರ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿರುವ ‘ಮಿದುಳು ಕ್ಲಿನಿಕ್’ನಲ್ಲಿ ಅಪಸ್ಮಾರಕ್ಕೆ ಉಚಿತ ಚಿಕಿತ್ಸೆ ಔಷಧಿ ಲಭ್ಯವಿದೆ. ರೋಗಿಗಳು ಪಡೆದುಕೊಳ್ಳಬೇಕು
ಡಾ.ಕೆ.ಎಂ.ಸತೀಶ್ಕುಮಾರ್ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ.

ಮೂಢನಂಬಿಕೆ ಬಿಡಲು ಸಲಹೆ

ಮೊದಲ ಹಂತದಲ್ಲಿ ಫಿಡ್ಸ್ ಅಥವಾ ಮೂರ್ಛೆ ಬಂದಾಗ ಆರಂಭದಲ್ಲಿ ಕೇವಲ 30 ಸೆಕೆಂಡ್ ಅಥವಾ 1 ನಿಮಿಷ ಇರುತ್ತದೆ. ಆಗ ಹೆಚ್ಚಿನವರು ನೀರು ಕುಡಿಸುವುದು ತಬ್ಬಿ ಹಿಡಿಯುವುದು ಕಬ್ಬಿಣದ ವಸ್ತು ಕೊಡುವುದು ಈರುಳ್ಳಿ ಚಪ್ಪಲಿ ಮೂಸಿಸುವುದು ಮಾಡುತ್ತಾರೆ. ಇವೆಲ್ಲವೂ ಮೌಢ್ಯತೆ. ಈ ರೀತಿಯಾದಾಗ ಎಡಭಾಗಕ್ಕೆ ಮಲಗಿಸಿ ಹೆಚ್ಚು ಗಾಳಿಯಾಡುವುದಕ್ಕೆ ಸ್ಥಳಾವಕಾಶ ನೀಡಬೇಕು. ಯಾವುದೇ ಕಾರಣ ನೀರು ಅಥವಾ ಯಾವುದೇ ದ್ರವ ಕುಡಿಸಬಾರದು ಆಹಾರ ನೀಡಬಾರದು. ಕೆಲವು ನಿಮಿಷಗಳ ನಂತರ ವ್ಯಕ್ತಿ ಸರಿ ಹೋದ ನಂತರ ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು. ಆ ನಂತರ ಜಿಲ್ಲಾಸ್ಪತ್ರೆಯಲ್ಲಿರುವ ಮಿದುಳು ಕ್ಲಿನಿಕ್ಗೆ ಕರೆದುಕೊಂಡು ಬರಬೇಕು ಎಂದು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜನಾಧಿಕಾರಿ ಆರ್.ವಿಕ್ರಂ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಗ್ಯ ಕಾರ್ಯಕರ್ತರಿಗೆ ತರಬೇತಿ

ಅಪಸ್ಮಾರ ಸೇರಿದಂತೆ ಇತರ ನರರೋಗಗಳಿಗೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ‘ಟೆಲಿ ನ್ಯೂರೊಲಜಿ’ ಸೇವೆ ಕುರಿತಂತೆ ಕಳೆದ ತಿಂಗಳಷ್ಟೇ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಈ ತಿಂಗಳು ಸಮುದಾಯ ಆರೋಗ್ಯ ಅಧಿಕಾರಿಗಳು ವೈದ್ಯಾಧಿಕಾರಿಗಳು ಶೂಶ್ರುಷಕ ಅಧಿಕಾರಿಗಳು ಫಾರ್ಮಾಸಿಸ್ಟ್ಗಳಿಗೆ ತರಬೇತಿ ನೀಡಲಿದ್ದೇವೆ ಎಂದು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಕೊಡಗು ಜಿಲ್ಲಾ ಕಾರ್ಯಕ್ರಮದ ಅಧಿಕಾರಿ ಡಾ.ಜಿ.ಕೆ.ಸನತ್ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.