ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2’ ಚಾಂಪಿಯನ್‌

ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ಗೆ ಸಂಭ್ರಮದ ತೆರೆ
Published 29 ಏಪ್ರಿಲ್ 2024, 4:03 IST
Last Updated 29 ಏಪ್ರಿಲ್ 2024, 4:03 IST
ಅಕ್ಷರ ಗಾತ್ರ

ಮಡಿಕೇರಿ: ‘ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2’ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿದ್ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ಗೆ ಸಂಭ್ರಮದ ತೆರೆ ಬಿತ್ತು.

ದಿ ಎಲೈಟ್ ತಂಡ ಹಾಗೂ ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ತಂಡಗಳ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ತಂಡವು 10 ರನ್‌ಗಳ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಕ್ವಾಡ್-2 ತಂಡ ನಿಗದಿತ 10 ಓವರ್‌ಗಳಲ್ಲಿ 83 ರನ್ ಗಳಿಸಿತು. ತಂಡದ ಪರ ಮನ್ವಿತ್ ಕಲ್ಲುಗದ್ದೆ 8 ಎಸೆತಗಳಲ್ಲಿ 19 ರನ್ ಗಳಿಸಿದರು. ಆಕರ್ಷ್ 18 ರನ್ ಗಳಿಸಿದರು. ಎಲೈಟ್ ತಂಡದ ಪರ ಧಿನೇಂದ್ರ ಅಣ್ಣಚಿರ ಮತ್ತು ಕಾರ್ತಿಕ್ ತಲಾ 2 ವಿಕೆಟ್ ಪಡೆದರು. ಲೋಕೇಶ್, ನಿತಿನ್ ಮತ್ತು ಶರತ್ ಚೊಕ್ಕಾಡಿ ತಲಾ 1 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಎಲೈಟ್ ತಂಡ ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ 10 ರನ್ ಗಳಿಂದ ಸೋಲು ಕಂಡಿತು. ವಿಜೇತ ‘ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2’ ತಂಡಕ್ಕೆ ₹ 1,11,111 ಮೊತ್ತದ ಪ್ರಶಸ್ತಿ ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.

ತಂಡದ ಪರ ಹೊಸೂರ್ ಹಿತಕೃತ್ ಅಶೋಕ್ ಅತ್ಯಧಿಕ 25 ರನ್ ಗಳಿಸಿದರು. ಸ್ಕ್ವಾಡ್-2 ತಂಡದ ಪರ ಮನ್ವಿತ್ ಕಲ್ಲುಗದ್ದೆ ಮತ್ತು ನಯನ್ ಚೆರಿಯಮನೆ ತಲಾ 2 ವಿಕೆಟ್ ಹಾಗೂ ಎಡಿಕೇರಿ ನೂತನ್ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಒಂದೇ ಪ್ರಾಂಚೈಸಿಯ ಎರಡೂ ತಂಡಗಳು ಫೈನಲ್ ಪ್ರವೇಶಿಸಿದ್ದು ಹಾಗೂ ಗೌಡ ಪ್ರೀಮಿಯರ್ ಲೀಗ್‌ನಲ್ಲಿ ಎಲೈಟ್ ತಂಡ ಸತತ 2ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ವಿಶೇಷ ಎನಿಸಿತು. ‌ಇದಕ್ಕೂ ಮುನ್ನ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಕೂರ್ಗ್ ವಾರಿಯರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ, ಜಿಪಿಎಲ್ ಸೀಸನ್-2ರಲ್ಲಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು‌.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು‌. ತಂಡದ ಪರ ಅನಿಲ್ ಕುಡೇಕಲ್ಲು 29 ಎಸೆತಗಳಲ್ಲಿ 66 ರನ್ ಗಳಿಸಿದರು. 4 ಬೌಂಡರಿ 6 ಸಿಕ್ಸರ್‌ಗಳು ಅವರ ಇನ್ನಿಂಗ್ಸ್‌ನಲ್ಲಿ ಮೂಡಿಬಂದವು. ಎಲೈಟ್ ತಂಡ ಪರ ಕಾರ್ತಿಕ್, ಶರತ್ ಚೊಕ್ಕಾಡಿ, ಧಿನೇಂದ್ರ ಅಣ್ಣಚಿರ, ನಿತಿನ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು‌.

ಗುರಿ ಬೆನ್ನಟ್ಟಿದ ಎಲೈಟ್ ತಂಡ 9 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಲೋಕೇಶ್ 28 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿ ತಂಡದ ಗೆಲುವಿನ ರುವಾರಿಯಾದರು‌. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಮೂಡಿಬಂದವು. ಕೂರ್ಗ್ ವಾರಿಯರ್ಸ್ ಪರ ಅನಿಲ್ ಕುಡೇಕಲ್ಲು ಮತ್ತು ಕುಜಲ್ ಕಾರ್ಯಪ್ಪ ತಲಾ ಒಂದು ವಿಕೆಟ್ ಪಡೆದರು‌. ಇದರೊಂದಿಗೆ ಎಲೈಟ್ ತಂಡ ಫೈನಲ್ ಪ್ರವೇಶ ಪಡೆಯಿತು.

ಮಹಿಳೆಯ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆದ ಪ್ಯಾಂಥರ್ಸ್ ಕ್ಲಬ್ ಕೊಡಗು ತಂಡ
ಮಹಿಳೆಯ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆದ ಪ್ಯಾಂಥರ್ಸ್ ಕ್ಲಬ್ ಕೊಡಗು ತಂಡ
ಮಹಿಳಾ ಕ್ರಿಕೆಟ್‌ನಲ್ಲಿ 2ನೇ ಸ್ಥಾನ ಪಡೆದ ಬ್ಲ್ಯಾಕ್ ಪ್ಯಾಂಥರ್ಸ್ ತಂಡ
ಮಹಿಳಾ ಕ್ರಿಕೆಟ್‌ನಲ್ಲಿ 2ನೇ ಸ್ಥಾನ ಪಡೆದ ಬ್ಲ್ಯಾಕ್ ಪ್ಯಾಂಥರ್ಸ್ ತಂಡ
‌ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ
‌ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ
ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆದ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ‘ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2’ ತಂಡದ ಸದಸ್ಯರು ಟ್ರೋಫಿಯನ್ನು ಹಿಡಿದು ಸಂಭ್ರಮಿಸಿದರು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆದ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ‘ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2’ ತಂಡದ ಸದಸ್ಯರು ಟ್ರೋಫಿಯನ್ನು ಹಿಡಿದು ಸಂಭ್ರಮಿಸಿದರು.

ಮಹಿಳಾ ಕ್ರಿಕೆಟ್‌; ಪ್ಯಾಂಥರ್ಸ್ ಕ್ಲಬ್‌ಗೆ ಕಪ್

ಮಹಿಳೆಯರ ಕ್ರಿಕೆಟ್‌ನಲ್ಲಿ ಪ್ಯಾಂಥರ್ಸ್ ಕ್ಲಬ್ ಕೊಡಗು ತಂಡವು 7 ರನ್‌ಗಳ ರೋಚಕ ಜಯವನ್ನು ಬ್ಲ್ಯಾಕ್ ಪ್ಯಾಂಥರ್ಸ್ ತಂಡದ ವಿರುದ್ಧ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ದಿ ಎಲೈಟ್ ವಿಮೆನ್ಸ್ ಬೆಂಗಳೂರು ತಂಡವು ಮರಗೋಡು ರಿಕ್ರಿಯೇಷನ್ ಕ್ಲಬ್ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು. ಗುಡ್ಲೂರು ಕಾವೇರಿ ಟೀಮ್ ಚೇರಳ ಗೌಡ ಸಮಾಜ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಪಡೆದರೆ ಬ್ಲ್ಯಾಕ್ ಪ್ಯಾಂಥರ್ಸ್ ತಂಡಕ್ಕೆ ಚೇರಳ ಗೌಡ ಸಮಾಜದ ವಿರುದ್ದ 8 ವಿಕೆಟ್‌ಗಳು ಹಾಗೂ ಬ್ಲಾಸಮ್ ಬೆಲ್ಸ್ ತಂಡವು ವೈಲ್ಡ್ ಮಾಸ್ಟರ್ಸ್ ವಿಮೆನ್ ವಿರುದ್ಧ 2 ರನ್‌ಗಳ ರೋಚಕ ಜಯ ಪಡೆಯಿತು. ನಂತರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಿ ಎಲೈಟ್ಸ್ ವಿಮೆನ್ ಬೆಂಗಳೂರು ತಂಡವನ್ನು 8 ವಿಕೆಟ್‌ಗಳಿಂದ ಬ್ಲ್ಯಾಕ್ ಪ್ಯಾಂಥರ್ಸ್ ತಂಡ ಮಣಿಸಿದರೆ 2ನೇ ಸೆಮಿಫೈನಲ್‌ನಲ್ಲಿ ಪ್ಯಾಂಥರ್ಸ್ ಕ್ಪಬ್ ತಂಡವು ಅಮೋಘ 71 ರನ್‌ಗಳಿಂದ ವೈಲ್ಡ್ ಮಾಸ್ಟರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯವನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.

ಸಾಧಕರ ವಿವರ

ಸರಣಿ ಪುರುಷೋತ್ತಮ ರಾಹುಲ್ ಅತ್ರಮಜಲು (ದಿ ಎಲೈಟ್ ಸ್ಕ್ವಾಡ್-2) ಅತ್ಯುತ್ತಮ ಬ್ಯಾಟ್ಸ್‌ಮನ್ ಅನಿಲ್ ಕುಡೆಕಲ್ (ಕೂರ್ಗ್ ವಾರಿಯರ್ಸ್) ಅತ್ಯುತ್ತಮ ಬೌಲರ್ ತುಷಾರ್ ಮೂವನ (ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ) ಅತ್ಯುತ್ತಮ ವಿಕೆಟ್ ಕೀಪರ್ ಜಶ್ವಂತ್ ಗುತ್ತಿಮುಂಡನ (ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ) 20 ವರ್ಷದೊಳಗಿನ ಬೆಸ್ಟ್ ಎರ್ಮಜಿಂಗ್ ಪ್ಲೇಯರ್ (ಡಾ.ಕುಶ್ವಂತ್ ಕೋಳಿಬೈಲು ಪ್ರಾಯೋಜಿತ) ಎಡಿಕೇರಿ ಗಣಿತ್ (ದಿ ಎಲೈಟ್ ಕ್ರಿಕೆಟ್ ಕ್ಲಬ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT