ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೇಪಂಡ ತಂಡಕ್ಕೆ ಭರ್ಜರಿ ಜಯ

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ
Published 19 ಏಪ್ರಿಲ್ 2024, 7:26 IST
Last Updated 19 ಏಪ್ರಿಲ್ 2024, 7:26 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಸಾಂಘಿಕ ಹೋರಾಟ ಮೆರೆದ ಮಂಡೇಪಂಡ ತಂಡದವರು, ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಗುರುವಾರದ ಪಂದ್ಯದಲ್ಲಿ 5–0 ಗೋಲುಗಳಿಂದ ನಾಗಂಡ ತಂಡದ ವಿರುದ್ಧ ಸುಲಭ ಜಯ ಸಾಧಿಸಿದರು.

ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಡೇಪಂಡ ತಂಡದ ಗೌತಮ್‌ ಹಾಗೂ ಕವನ್‌ ಮುತ್ತಪ್ಪ ತಲಾ 2 ಗೋಲು ಗಳಿಸಿದರೆ, ಚಂದನ್‌ ಒಂದು ಗೋಲನ್ನು ನೆಟ್‌ಗೆ ಸೇರಿಸಿದರು. 

ಮತ್ತೊಂದು ಪಂದ್ಯದಲ್ಲಿ ಅರೆಯಡ ತಂಡದವರು ಪೆನಾಲ್ಟಿ ಶೂಟೌಟ್‌ನಲ್ಲಿ 5–4 ಅಂತದಲ್ಲಿ ಕರೋಟಿರ ತಂಡದವರ ವಿರುದ್ಧ ರೋಚಕ ಗೆಲುವು ದಾಖಲಿಸಿದರು. ಚೆರುಮಾದಂಡ ತಂಡದವರೂ ಅದೇ ಅಂತರದಲ್ಲಿ ಬಲ್ಲಚಂಡ ತಂಡದವರನ್ನು ಮಣಿಸಿದರು.

ಕುಪ್ಪಂಡ (ಕೈಕೇರಿ) ತಂಡವು ಬೊಪ್ಪಂಡ ವಿರುದ್ಧ ಹಾಗೂ ಕುಲ್ಲೇಟಿರ ತಂಡವು ಕಲಿಯಾಟಂಡ ವಿರುದ್ಧ 4-0ರಿಂದ ಜಯ ಗಳಿಸಿದವು.

ನೆಲ್ಲಮಕ್ಕಡ 3-0ಯಿಂದ ಕರ್ತಮಾಡ ವಿರುದ್ಧ; ಅಂಜಪರವಂಡ 3-1ರಿಂದ ಅಪ್ಪಚೆಟ್ಟೋಳಂಡ ವಿರುದ್ಧ; ಕೊಕ್ಕಂಡ 2-0ಯಿಂದ ಮುಕ್ಕಾಟಿರ ವಿರುದ್ಧ; ಪೆಮ್ಮಂಡ 2-0ಯಿಂದ ಪಾಂಡಂಡ ವಿರುದ್ಧ; ಐನಂಡ 3-1ರಿಂದ ಮುರುವಂಡ ವಿರುದ್ಧ; ಕೂತಂಡ 2-0ಯಿಂದ ಚಿಂದಮಾಡ ವಿರುದ್ಧ; ಬಾಳೆಯಡ 3-1ರಿಂದ ಚೌರೀರ ವಿರುದ್ಧ; ಬೊಳ್ಳಂಡ 1-0ಯಿಂದ ಮೂಕಂಡ ವಿರುದ್ಧ; ಚೀಯಕಪೂವಂಡ 3-2 ಗೋಲುಗಳಿಂದ ಕಳ್ಳಿಚಂಡ ವಿರುದ್ಧ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT