ಕುಶಾಲನಗರ : ತಾಲ್ಲೂಕು ಕೇರಳ ಸಮಾಜ ಆಶ್ರಯದಲ್ಲಿ ಓಣಂ ಹಬ್ಬದ ಆಚರಣೆ ಈಚೆಗೆ ನಡೆಯಿತು.

ಹಬ್ಬಾಚರಣೆ ಅಂಗವಾಗಿ ಇಂದಿರಾಬಡಾವಣೆಯಲ್ಲಿರುವ ಕೇರಳ ಸಮಾಜದ ಬಳಿಯಿಂದ ಸಭಾಂಗಣ ತನಕ ಚೆಂಡೆ ವಾದ್ಯದ ಸಹಿತ ಮಾವೇಲಿ ವೇಷಧಾರಿಯ ಮೆರವಣಿಗೆ ನಡೆಯಿತು. ಸಮಾಜದವರು ಸಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಂಡಿದ್ದರು. ಸದಸ್ಯರಿಗೆ ಬೆಳಿಗ್ಗೆ ಪೂಕಳಂ ಸ್ಪರ್ಧೆ , ಮಕ್ಕಳಿಗೆಚಿತ್ರ ರಚನೆ ಸ್ಪರ್ಧೆ ನಡೆಯಿತು.

ಸಮಾಜದ ಅಧ್ಯಕ್ಷ ಪಿ. ರವೀಂದ್ರನ್ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ. ಎಂ. ವಿಜಯ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ ಶಶಿಧರ್ ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಪಾಲ್ಗೊಂಡಿದ್ದರು.

ಕೇರಳ ಸಮಾಜದ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು. ಸಾಧಕ ಎಂಜಿನಿಯರಿಂಗ್ ವಿದ್ಯಾರ್ಥಿನಿ ಜಾಯ್ಸ್ ಲೀನಾ ಜೋಸೆಫ್ , ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಉಪಾಧ್ಯಕ್ಷ ಕೆ ಬಾಬು, ಕಾರ್ಯದರ್ಶಿ ಕೆ ಜೆ ರಾಬಿನ್ ಸಹ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ ಸಿ ಆನಂದ್ ನಿರ್ದೇಶಕರುಗಳಾದ ಕೆ ವರದ ಎಂ ಜಿ ಪ್ರಕಾಶ್, ಪಿ. ಕೆ. ಧನರಾಜ್ ಎನ್. ಎ. ಸುಶೀಲ ವಿ. ಎಸ್. ಜಿತೇಶ್, ನಿರ್ಮಲ ಶಿವರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.