ಸೋಮವಾರ ಬೆಳಿಗ್ಗೆ ಕೊಡಗಿನ ಅಲ್ಲಲ್ಲಿ ಸುರಿದ ಭಾರಿ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಬೆಳಿಗ್ಗೆ 8 ಗಂಟೆ ಹೊತ್ತಿಗೆ 2,362 ಕ್ಯುಸೆಕ್ ಇದ್ದ ಒಳ ಹರಿವು 11 ಗಂಟೆ ಹೊತ್ತಿಗೆ 7,800 ಕ್ಯುಸೆಕ್ ಗೆ ಏರಿಕೆಯಾಯಿತು. ಇದರಿಂದ ನದಿಗೆ 11,800 ಕ್ಯುಸೆಕ್ ನಷ್ಟು ನೀರನ್ನು ಹೊರಬಿಡಲಾಗುತ್ತಿದೆ.