ಮಡಿಕೇರಿ: ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ ಹಾಗೂ ಹೋಂಸ್ಟೇ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಹೈಟೆಕ್ ವಂಚಕರ ತಂಡವೊಂದು ಕಾರ್ಯನಿರ್ವಹಿಸುತ್ತಿರುವ ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮುಂಗಡ ಬುಕ್ಕಿಂಗ್ ಪಾವತಿಗಾಗಿ ಹೇಳುವ ಹಣಕ್ಕಿಂತ ಹೆಚ್ಚು ಹಣವನ್ನು ಕಣ್ತಪ್ಪಿನಿಂದ ಗೂಗಲ್ ಪೇ, ಫೋನ್‌ಪೇ ಮೂಲಕ ಮಾಡಿರುವುದಾಗಿ ವಂಚಕರು ನಕಲಿ ಸ್ಕ್ರೀನ್ ಶಾಟ್ ಕಳುಹಿಸುತ್ತಾರೆ. ತಮಗೆ ತುರ್ತು ಹಣದ ಅಗತ್ಯವಿದ್ದು, ಹೆಚ್ಚು ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡುತ್ತಾರೆ. ನಕಲಿ ಸ್ಕ್ರೀನ್ ಶಾಟ್ ನೋಡಿದ ಸಿಬ್ಬಂದಿ ಬಹುಶಃ ಹಣ ಖಾತೆಗೆ ಬಂದಿರಬಹುದು ಎಂದು ಭಾವಿಸಿ, ಹೆಚ್ಚುವರಿ ಹಣವನ್ನು ವಾಪಸ್ ಕಳುಹಿಸುತ್ತಾರೆ. ಆದರೆ, ವಾಸ್ತವದಲ್ಲಿ ಯಾವುದೇ ಹಣ ಹೋಟೆಲ್‌ನವರ ಖಾತೆಗೆ ಬಂದಿರುವುದಿಲ್ಲ. ಇದೇ ಮಾದರಿಯಲ್ಲಿ ಹಲವು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರನ್ನು ಹೈಟೆಕ್ ವಂಚಕರು ಈಗಾಗಲೇ ವಂಚಿಸಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.